ಸುಳ್ಯ ನಗರದ ಕಲ್ಲುಮುಟ್ಲು ರೇಚಕ ಸ್ಥಾವರದ ನೀರೆತ್ತುವ ಜಾಕ್ ವೆಲ್ ನಲ್ಲಿ ಇತ್ತೀಚಿಗಿನ ವಿಪರೀತ ಮಳೆ ಹಾಗೂ ಭೂಕುಸಿತದಿಂದ ಸಂಪಾಜೆ ಕಡೆಯಿಂದ ಭಾರಿ ಪ್ರಮಾಣ ದಲ್ಲಿ ಕೆಸರು ಹರಿದುಬಂದು ಹೂಳು ತುಂಬಿರುವುದರಿಂದ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಿರುತ್ತದೆ. ಇದರಿಂದ ಹೂಳೆತ್ತುವ ಕಾಮಗಾರಿಯು ಸೆಪ್ಟೆಂಬರ್ 6 ಮತ್ತು 7 ರಂದು ನಡೆಯಲಿದ್ದು ನಗರದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ನಗರ ಪಂಚಾಯತ್ ಪ್ರಕಟಣೆಯಲ್ಲಿ ತಿಳಿಸಿದೆ.
- Thursday
- November 21st, 2024