ಸರ್ಕಾರಿ ಪದವಿ ಕಾಲೇಜು ಸುಳ್ಯದಲ್ಲಿ ಆ.30 ರಂದು ನಡೆದ ಶಾಲಾ ವಿದ್ಯಾರ್ಥಿಗಳ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ. ಉಪ ಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎನ್.ಎಂ.ಪಿ.ಸಿ ಅರಂತೋಡು ಇಂದಿನ ಮುಖ್ಯ ಶಿಕ್ಷಕರಾದ ನಿವೃತ್ತ ನಿವೃತ್ತರಾಗಿ ಆಗಮಿಸಿದ ಆನಂದ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಶಿಕ್ಷಣ ಸಂಯೋಜಕಿ ಹಾಗೂ ಕಾರ್ಯಕ್ರಮಗಳ ನೋಡೆಲ್ ಅಧಿಕಾರಿಯಾಗಿರುವ ಶ್ರೀಮತಿ ಸಂಧ್ಯಾ ಕುಮಾರಿ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ಕೆ.ಪಿ.ಎಸ್ ಬೆಳ್ಳಾರೆ ಶಿಕ್ಷಕರಾದ ದಿನೇಶ್ ಗೌಡ ಮತ್ತು ಸುಳ್ಯ ಶಾಲೆಯ ಸಹ ಶಿಕ್ಷಕ ಸಂಘದ ಅಧ್ಯಕ್ಷರಾದ ಚಂದ್ರಶೇಖರ.ಕೆ.ಎಸ್ ಇವರು ಉಪಸ್ಥಿತರಿದ್ದು ಶುಭಹಾರೈಸಿದರು. ನಂತರ ನಡೆದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಸುಳ್ಯ ಪದವಿ ಪೂರ್ವ ಕಾಲೇಜು ತಂಡ ಪ್ರಥಮ ಬಹುಮಾನ, ವಿದ್ಯಾಭೋದಿನಿ ಪ್ರೌಢಶಾಲೆ ಬಾಳಿಲ ಸ್ಥಳೀಯ ತಂಡ ದ್ವಿತೀಯ ಸ್ಥಾನ, ಸರಕಾರಿ ಪ್ರೌಢಶಾಲೆ ಎಣ್ಮೂರು ಸ್ಥಳೀಯ ತಂಡ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ.
ಸಮಾರೋಪ ಸಮಾರಂಭದಲ್ಲಿ ಸುಳ್ಯ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿಯಾದ ಶ್ರೀಮತಿ ಶೀತಲ್.ಯು.ಕೆ ಇವರು ಉಪಸ್ಥಿತರಿದ್ದು ವಿಜೇತ ತಂಡಕ್ಕೆ ಪ್ರಮಾಣಪತ್ರ ವಿತರಿಸಿದರು. ಕಾರ್ಯಕ್ರಮದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕರಾದ ಶ್ರೀಮತಿ ಚಂದ್ರಮತಿ, ಶ್ರೀಮತಿ ಮಮತಾ, ಶ್ರೀಮತಿ ಆಶಾ, ರೇಣುಕಾ, ದಿವಾಕರ, ಪೂರ್ಣಿಮಾ ಹಾಗೂ ಎಲ್ಲಾ ಶಿಕ್ಷಕರು ಸಹಕರಿಸಿದರು.