ಹಾವೇರಿಯಲ್ಲಿ ನಡೆಯಲಿರುವ ಅಗ್ನಿಪಥ್ ಆಯ್ಕೆ ಶಿಬಿರದಲ್ಲಿ ಭಾಗವಹಿಸಿದ ಸುಳ್ಯ ಕ್ಷೇತ್ರದ ಅಗ್ನಿವೀರ್ ಆಕಾಂಕ್ಷಿಗಳಿಗೆ ಮಾನ್ಯ ಮೀನುಗಾರಿಕೆ, ಬಂದರು ಮತ್ತು ಒಡನಾಡು ಜಲ ಸಾರಿಗೆ ಅಧಿಕಾರಿಗಳು ಮತ್ತು ಸುಳ್ಯ ಕ್ಷೇತ್ರದ ಶಾಸಕರಾದ ಶ್ರೀ ಎಸ್ ಅಂಗಾರರವರು ಪ್ರಯಾಣಿಸಲು ಬಸ್ಸಿನ ವ್ಯವಸ್ಥೆ ಮಾಡಿದ್ದು ಸುಳ್ಯದಿಂದ ಹಾವೇರಿಗೆ ಎರಡು ಬಸ್ಸಿನಲ್ಲಿ 105 ಯುವಕರನ್ನು ಕಳುಹಿಸುವ ವ್ಯವಸ್ಥೆ ಮಾಡಲಾಯಿತು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ಅಧ್ಯಕ್ಷ , ಯುವಕರಿಗೆ ಶುಭಹಾರೈಸ, ಮಂಡಲ ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಳ, ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಮಂಡಲ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕೇರ್ಪಳ, ಚಂದ್ರಶೇಖರ ನೆಡಿಲ್ ಉಪಸ್ಥಿತರಿದ್ದರು.