ಅಮರ ಸಂಘಟನಾ ಸಮಿತಿ ,ಅಮರ ಮುಡ್ನೂರು ಮತ್ತು ಪಡ್ನೂರು ಇದರ ಆಶ್ರಯದಲ್ಲಿ ದೇವಚಳ್ಳ ಗ್ರಾಮ ಪಂಚಾಯತ್ ಸಹಯೋಗದಲ್ಲಿ ವಿಶ್ವ ಪರಿಸರ ದಿನ ದ ಅಂಗವಾಗಿ ಜೂನ್ ೫ ರಂದು ಸೇವ್ ಟ್ರೀ ಸೇವ್ ಲೈಫ್ ಅಭಿಯನದಡಿಯಲ್ಲಿ ಕಾಡು ಬೆಳೆಸಿ ನಾಡು ಉಳಿಸಿ ಧ್ಯೇಯ ವಾಕ್ಯದೊಂದಿಗೆ ದೇವಚಳ್ಳ ಗ್ರಾಮ ಪಂಚಾಯತ್ ಪರಿಸರದಲ್ಲಿ ಎರಡನೇ ವರ್ಷದ ಗಿಡ ನೆಡುವ ಕಾರ್ಯಕ್ರಮ ಹಾಗೂ ಕಳೆದ ವರ್ಷ ನೆಟ್ಟಿರೀವ ಗಿಡಗಳ ನಿರ್ವಹಣಾ ಕಾರ್ಯವನ್ನು ಮಾಡಲಾಯಿತು.
ಕಾರ್ಯಕ್ರಮಕ್ಕೆ ಚನಿಯ ಕಲ್ತಡ್ಕ ಅಧ್ಯಕ್ಷರು ತಾಲೂಕು ಪಂಚಾಯತ್ ಸುಳ್ಯ,ಇವರು ಗಿಡ ನೆಡುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮಕ್ಕೆ ದಿವಾಕರ ಮುಂಡೋಡಿ,ಅಧ್ಯಕ್ಷರು ಗ್ರಾಮ ಪಂಚಾಯತ್ ದೇವಚಳ್ಳ, ಮೋಹಿನಿ ಅಡ್ಡನಪಾರೆ ಸದಸ್ಯರು ಗ್ರಾಮ ಪಂಚಾಯತ್ ದೇವಚಳ್ಳ, ಪಂಚಾಯತ್ ಕಾರ್ಯದರ್ಶಿ ಗುರುಪ್ರಸಾದ್,ಪಂಚಾಯತ್ ಗ್ರಂಥಪಾಲಕಿ ಸಾವಿತ್ರಿ ಕಣಿಮರಡ್ಕ, ಪಂಚಾಯತ್ ಸಿಬ್ಬಂದಿಗಳಾದ ಜಯರಾಮ, ಹಾಗೂ ಚೇತನ್ ಇವರುಗಳು ಸಹಕಾರ ನೀಡಿದರು. ಈ ಸಂದರ್ಭದಲ್ಲಿ ಅಮರ ಸಂಘಟನಾ ಸಮಿತಿಯ ಅಧ್ಯಕ್ಷರಾದ ಶಿವಪ್ರಸಾದ್ ದೊಡ್ಡಿಹಿತ್ಲು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
- Sunday
- November 24th, 2024