Ad Widget

ಸುಳ್ಯ : ಕರ್ನಾಟಕ ರಾಜ್ಯ ಅರೆಭಾಷೆ ಕಲಾವಿದರ ಒಕ್ಕೂಟದ ಸಮಿತಿ ಸಭೆ

ಅರೆಭಾಷೆ ಸಾಂಸ್ಕೃತಿಕ ಕ್ಷೇತ್ರದ ಪ್ರಗತಿ ಮತ್ತು ಭಾಷಾ ಬೆಳವಣಿಗೆಗೆ ಕಲಾವಿದರ ಕೊಡುಗೆ ಅಪಾರ, ಇತ್ತೀಚಿನ ದಿನಗಳಲ್ಲಿ ಅರೆಭಾಷೆ ರಂಗಭೂಮಿ ಮತ್ತು ಸಿನಿಮಾ ರಂಗ ಶ್ರೀಮಂತಿಕೆಯನ್ನು ಕಂಡು ಕೊಳ್ಳುತಿದ್ದು ಅರೆಭಾಷೆಯ ಗೌರವ ಮತ್ತು ಹಿರಿಮೆಯನ್ನು ಇಮ್ಮಡಿ ಗೊಳಿಸುತ್ತಿದೆ. ಅರೆಭಾಷೆ ಕಲಾವಿದರ ಒಗ್ಗಟ್ಟು ಮತ್ತು ಅರೆಭಾಷೆ ಕಲಾ ಕ್ಷೇತ್ರದ ಅಭಿವೃದ್ಧಿಗಾಗಿ ಸ್ಥಾಪನೆಗೊಂಡ ಕರ್ನಾಟಕ ರಾಜ್ಯ ಅರೆಭಾಷೆ ಕಲಾವಿದರ ಒಕ್ಕೂಟದ ಆಡಳಿತ ಮಂಡಳಿಯ ಸಾಮಾನ್ಯ ಸಭೆ ಜೂ. 25 ರಂದು ನಡೆಯಿತು. ಒಕ್ಕೂಟದ ಉಪಾಧ್ಯಕ್ಷ ಯೋಗೀಶ್ ಹೊಸೋಳಿಕೆ ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಒಕ್ಕೂಟದ ಮುಂದಿನ ಕಾರ್ಯ ಪ್ರಗತಿಯ ಬಗ್ಗೆ ಮಾತುಕತೆ ನಡೆಸಿ ಒಕ್ಕೂಟದ ವತಿಯಿಂದ ಮುಂದಿನ ದಿನಗಳಲ್ಲಿ ಅರೆಭಾಷೆಗೆ ಸಂಬಂಧಿತ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮವನ್ನು ನಡೆಸುವ ಬಗ್ಗೆ ಚರ್ಚಿಸಲಾಯಿತು. ಹಾಗೂ ಮುಂದಿನ ಒಕ್ಕೂಟದ ಸಭೆಯನ್ನು ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಪದಾಧಿಕಾರಿಗಳ ಮತ್ತು ಸರ್ವ ಸದಸ್ಯರ ಸಭೆ ಕರೆದು ಒಕ್ಕೂಟದ ಮುಂದಿನ ಅಭಿವೃದ್ಧಿ ಕಾರ್ಯ ಯೋಜನೆಗಳನ್ನು ತೀರ್ಮಾನಿಸುವುದೆಂದು ನಿರ್ಧರಿಸಲಾಯಿತು. ಒಕ್ಕೂಟದ ಕಾರ್ಯದರ್ಶಿ ಸುಧೀರ್ ಏನೆಕಲ್, ಕೋಶಾಧಿಕಾರಿ ತೇಜೇಶ್ವರ್ ಕುಂದಲ್ಪಾಡಿ, ಪ್ರಧಾನ ಸಂಚಾಲಕರು ಭವಾನಿಶಂಕರ್ ಅಡ್ತಲೆ, ಗೌರವ ಸಲಹೆಗಾರ ತೇಜಕುಮಾರ್ ಬಡ್ಡಡ್ಕ, ಸಂಘಟನ ಕಾರ್ಯದರ್ಶಿ ಪ್ರಸಾದ್ ಕಾಟೂರು, ನಿರ್ದೇಶಕರಾದ ವಿಜಯ ಕುಮಾರ್ ದೆಂಗೋಡಿ, ಹಾರಂಬಿ ಯತಿನ್ ವೆಂಕಪ್ಪ, ಪ್ರವೀಣ್ ಕಾಟೂರು ಉಪಸ್ಥಿತರಿದ್ದರು. ಸುಧೀರ್ ಏನೆಕಲ್ಲು ಸ್ವಾಗತಿಸಿ, ಪ್ರಸಾದ್ ಕಾಟೂರು ಕಾರ್ಯಕ್ರಮ ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading