ಐವರ್ನಾಡು – ಬಿರ್ಮುಕಜೆ ಅಮಲ ರಸ್ತೆಗೆ ಲೋಕೋಪಯೋಗಿ ಇಲಾಖೆಯಿಂದ ರೂ.1 ಕೋಟಿ ಅನುದಾನದಲ್ಲಿ ರಸ್ತೆ ಡಾಮರೀಕರಣವಾಗಿದ್ದು. ಜೂ.12 ರಂದು ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಉದ್ಘಾಟಿಸಿ ಮಾತನಾಡಿರು.
ಅವರು ಪಾಂಬಾರಿನಿಂದ ಮಾಡಾವು ಉಳಿಕೆಯಾದಂತಹ ಭಾಗಕ್ಕೆ ಸರಕಾರದಿಂದ ಅನುದಾನ ಮಂಜೂರು ಹಂತದಲ್ಲಿದೆ. ಅಲ್ಲದೆ ಕಲ್ಲೋಣಿ ದೇವರಕಾನ ರಸ್ತೆ, ನಿಡುಬೆ ರಸ್ತೆ ಐವರ್ನಾಡು ದೇವಸ್ಥಾನ ರಸ್ತೆಗೂ ಅನುದಾನ ದೊರೆಯಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರ.ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಐವರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ,ಉಪಾಧ್ಯಕ್ಷೆ ಸುಜಾತ ಪವಿತ್ರಮಜಲು, ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಟಾರ್, ಎ.ಪಿ.ಎಂ.ಸಿ ಮಾಜಿ ಉಪಾಧ್ಯಕ್ಷ ನವೀನ್ ಕುಮಾರ್ ಸಾರಕರೆ, ಗ್ರಾಮ ಪಂಚಾಯತ್ ಸದಸ್ಯರಾದ ಯೋಗೀಶ್ ಕಲ್ಲಗದ್ದೆ ಮಮತ ಉದ್ದಂಪಾಡಿ,ಸುಂದರಲಿಂಗಂ ಸಿ.ಕೂಪ್, ದೇವಿಪ್ರಸಾದ್ ಎಸ್.ಎನ್, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗಳಾದ ಲೋಕೇಶ್,ಪರಮೇಶ್ವರ್, ಮಂಜುಶ್ರೀ ಗೆಳೆಯರ ಬಳಗ ಅಧ್ಯಕ್ಷ ನಟರಾಜ್ ಸಿ.ಕೂಪ್, ಸತೀಶ್ ಎಡಮಲೆ,ಕುಸುಮಾಧರ ಮಡ್ತಿಲ, ಶೇಖರ ಮಡ್ತಿಲ, ಪುರಂದರ ನಾಯ್ಕ, ಜನಾರ್ಧನ ಬಿರ್ಮುಕಜೆ, ಶ್ಯಾಂಪ್ರಸಾದ್ ಮಡ್ತಿಲ, ಶಿವಪ್ರಸಾದ್ ಕಟ್ಟತ್ತಾರು,ರಾಜಾರಾಮ ರಾವ್ ಉದ್ದಂಪಾಡಿ, ಕರುಣಾಕರ ಆಕ್ರಿಕಟ್ಟೆ, ಎಲ್ಯಣ್ಣ ಗೌಡ ಕುಳ್ಳಂಪಾಡಿ, ಕುಮಾರ ಕಟ್ಟತ್ತಾರು, ಪ್ರಜ್ವಲ್ ಹಾಗೂ ರಸ್ತೆಯ ಫಲಾನುಭವಿಗಳು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಸದಸ್ಯ ಯೋಗೀಶ್ ಕಲ್ಲಗದ್ದೆ ಸ್ವಾಗತಿಸಿ,ನ್ಯಾಯವಾದಿ ಜಯಪ್ರಸಾದ್ ಕಜೆತ್ತಡ್ಕ ವಂದಿಸಿದರು.