ನೆಹರೂ ಸ್ಮಾರಕ ಪದವಿ ಕಾಲೇಜು ಸುಳ್ಯ ಇಲ್ಲಿನ ನೇಚರ್ ಕ್ಲಬ್ ವತಿಯಿಂದ ಸಾಮಾಜಿಕ ಅರಣ್ಯ ಇಲಾಖೆ ಸುಳ್ಯ ವಲಯ, ಶಾಲಾ ಸಂಚಲನ ಸಮಿತಿ, ಶಾಲಾಭಿವೃದ್ಧಿ ಸಮಿತಿ ದರ್ಖಾಸ್ತು, ಸ್ತ್ರೀ ಶಕ್ತಿ ಸಂಘಗಳು ಬೆಳ್ಳಾರೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದರ್ಖಾಸ್ತುನಲ್ಲಿ ಹಸಿರು ಉಸಿರು ಸಸ್ಯೋದ್ಯಾನ ನಿರ್ಮಾಣ ಮತ್ತು ಶ್ರಮದಾನ ಕಾರ್ಯಕ್ರಮ ಜೂ. 11ರಂದು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಶಾಲಾ ಸಂಚಲನ ಸಮಿತಿ ಅಧ್ಯಕ್ಷೆ ರಾಜೀವಿ ರೈಯವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ್ ಸಭಾಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಸ್ಥಳೀಯ ಕೃಷಿ ಸಾಧಕರಾದ ಪ್ರೇಮಲತಾ ರೈ, ಸತ್ಯಶಂಕರ ಭಟ್ ಮತ್ತು ಸುಪ್ರಿಯಾ ಎನ್ ಆಳ್ವ ಇವರನ್ನು ಗುರುತಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಸುಳ್ಯ ವಲಯ ಅರಣ್ಯ ಅಧಿಕಾರಿ ಶೈಲಜಾ ಎಲ್, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಅನಿಲ್ ರೈ ಪುಡ್ಕಜೆ, ಗೊಂಚಲು ಸಮಿತಿ ಬೆಳ್ಳಾರೆ ವಲಯ ಅಧ್ಯಕ್ಷೆ ಸುಜಾತ, ಸ್ಥಳೀಯ ದಾನಿಗಳಾದ ಶಶಿಕಲಾ ರೈ, ಅಂಗನವಾಡಿ ಕಾರ್ಯಕರ್ತೆ ಅಂಜು ಸಾರಾ ಮ್ಯಾಥ್ಯೂ ಉಪಸ್ಥಿತರಿದ್ದರು. ಎನ್ನೆಂಸಿ ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಮತ್ತು ನೇಚರ್ ಕ್ಲಬ್ ಸಂಯೋಜಕರಾದ ಕುಲದೀಪ್ ಪೆಲ್ತಡ್ಕ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಶಾಲಾ ಮುಖ್ಯ ಶಿಕ್ಷಕಿ ಪಲ್ಲವಿ ಪಿ ವಂದಿಸಿದರು. ನೇಚರ್ ಕ್ಲಬ್ ಸದಸ್ಯರಾದ ಚಂಪಾ ಮತ್ತು ಅರ್ಚನಾ ಪ್ರಾರ್ಥಿಸಿ, ಕೀರ್ತನ ಮತ್ತು ಜಗದೀಶ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕರಾದ ಕೃತಿಕಾ, ಅಜಿತ್ ಕುಮಾರ್ ಮತ್ತು ಪ್ರಿಯ ಹಾಗೂ ಶಾಲಾ ಶಿಕ್ಷಕಿಯರಾದ ಪ್ರೇಮ, ಸೆಮೀಮ ಮತ್ತು ಗುಣಶ್ರೀ ಸಹಕರಿಸಿದರು.
ಕಾಲೇಜಿನ ನೇಚರ್ ಕ್ಲಬ್ ಸದಸ್ಯರು ಶಾಲಾ ಆವರಣದಲ್ಲಿ ಸುಮಾರು 40 ವಿವಿಧ ಜಾತಿಯ ಹಣ್ಣಿನ, ಔಷದೀಯ, ಹೂವಿನ ಗಿಡಗಳನ್ನು ನೆಟ್ಟು ಶಾಲೆಯ ಅಭಿವೃದ್ಧಿ ಸಮಿತಿ, ಶಿಕ್ಷಕ ವೃಂದ ಮತ್ತು ಮಕ್ಕಳಿಗೆ ಪೋಷಿಸುವ ಜವಾಬ್ದಾರಿ ವಹಿಸಲಾಯಿತು.