Ad Widget

ಅರೆಭಾಷೆ ಅಕಾಡೆಮಿಯ ದೇಯೋದ್ದೇಶ ಕಡೆಗಣಿಸಿರುವ ಅಧ್ಯಕ್ಷರನ್ನು ವಜಾ ಮಾಡುವಂತೆ ಸಾಹಿತಿ ಎ.ಕೆ.ಹಿಮಕರ ಒತ್ತಾಯ

ಅರೆಭಾಷೆ ಅಕಾಡೆಮಿ ಸ್ಥಾಪನೆಯಾದಾಗ ಯಾವ ದೇಯೋದ್ದೇಶ ಇತ್ತೋ ಅದನ್ನು ಕಡೆಗಣಿಸಿರುವ ಅಧ್ಯಕ್ಷರನ್ನು ವಜಾ ಮಾಡುವಂತೆ ಎ.ಕೆ.ಹಿಮಕರ ಒತ್ತಾಯಿಸಿದರು.

. . . . . . .

ಅವರು ಸುಳ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕರ್ನಾಟಕ ಆರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ಸ್ಥಾಪನೆಯಾಗಿ ದಶಮಾನೋತ್ಸವದ ಮೊದಲೇ ಆಕಾಡೆಮಿಯು ಅಧೋಗತಿಗೆ ತಲುಪಿರುವುದು ದುರಂತ. ಈ ದುಸ್ಥಿತಿಗೆ ತಲುಪಲು ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಸಹಸದಸ್ಯ ಡಾ| ವಿಶ್ವನಾಥ ಬದಿಕಾನ ಹಾಗೂ ಡಾ| ಪೂವಪ್ಪ ಕಣಿಯೂರು ಕಾರಣ ಎಂದು ಆರೋಪಿಸಿದರು.

ಅರೆಭಾಷೆ ಅಕಾಡೆಮಿಯ ಸ್ಥಾಪನೆಯ ಉದ್ದೇಶವು ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ಅಧ್ಯಯನ ಮತ್ತು ಪ್ರಕಟಣೆಯನ್ನು ಮುನ್ನಡೆಸುವುದು ಮಾತ್ರ ಇದರ ಹೊರತಾಗಿ ಯಕ್ಷಗಾನ, ನಾಟಕ, ತಾಳಮದ್ದಳೆ ನಡೆಸುವುದು ಆಕಾಡೆಮಿಯ ಪರಿಧಿಯ ಹೊರತಾಗಿವೆ. ನಾಟಕ ಮಾಡಲು ನಾಟಕ ಆಕಾಡೆಮಿ ಇದೆ. ಯಕ್ಷಗಾನ ಮಾಡಲು ಯಕ್ಷಗಾನ ಅಕಾಡೆಮಿ ಇದೆ. ನಾಟಕ, ಯಕ್ಷಗಾನಗಳನ್ನು ಅರೆಭಾಷೆಯಲ್ಲೇ ಮಾಡುವುದಿದ್ದರೂ ಅಂತಹ ಅಕಾಡೆಮಿಗಳ ಸಹಭಾಗಿತ್ವವನ್ನು ಪಡೆದುಕೊಳ್ಳಲು ಅವಕಾಶವಿತ್ತು. ಅದನ್ನು ಕಡೆಗಣಿಸಿರುವ ಇಂತಹ ಸ್ಟೇಚ್ಛಾಚಾರದ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಕ್ರಿಯಾ ಯೋಜನೆಗಳಿಗೆ ಅನುಮತಿ ನೀಡಿರುವ ರಿಜಿಸ್ಟಾರ್ ಅವರ ನಿರ್ಧಾರಗಳು ಪ್ರಶ್ನಾರ್ಹವಾಗಿವೆ. ಅಧ್ಯಯನ ಮತ್ತು ಪುಸ್ತಕ ಪ್ರಕಟಣೆಗಳಿಗಾಗಿ ಬಳಸಬೇಕಿದ್ದ ಸುಮಾರು 10 ಲಕ್ಷಕ್ಕೂ ಅಧಿಕ ಹಣವನ್ನು ಒಂದು ನಾಟಕಕ್ಕಾಗಿ ಖರ್ಚು ಮಾಡಿ, ಮೂರು ವರ್ಷಗಳ ಹಿಂದೆಯೇ ಸಿದ್ಧಗೊಂಡಿರುವ ಸ್ವತಃ ಆಕಾಡೆಮಿ ನಿರ್ದೇಶಿತ 10 ಅಧ್ಯಯನ ಗ್ರಂಥಗಳನ್ನು ಪ್ರಕಟ ಮಾಡದೇ ಇರುವುದು ಅಧ್ಯಕ್ಷರ ಪೂರ್ವಾಗ್ರಹಪೀಡಿತ ಮತ್ತು ಏಕಪಕ್ಷೀಯ ಸರ್ವಾಧಿಕಾರಿ ಧೋರಣೆಗೆ ಸಾಕ್ಷಿಯಾಗಿ ನಿಂತಿದೆ. ಈ ಹಿಂದಿನ ಎರಡು ವರ್ಷಗಳ ಅವಧಿಯಲ್ಲಿ ಒಂದೇ ಒಂದು ಪುಸ್ತಕವನ್ನು ಪ್ರಕಟಿಸಿರುವುದಿಲ್ಲ. ಅಂತಿಮ ವರ್ಷದ ಕೊನೆಯ ಭಾಗದಲ್ಲಿ ಕೆಲವು ಕೃತಿಗಳನ್ನು ತುರ್ತಾಗಿ ಪ್ರಕಟಿಸಲಾಗಿದೆ. ಪಿ.ಸಿ. ಜಯರಾಮರವರು ಅಧ್ಯಕ್ಷರಾಗಿದ್ದ ಸಮಯ ಕೇವಲ 18 ತಿಂಗಳಲ್ಲಿ 18 ಕೃತಿಗಳನ್ನು ಪ್ರಕಟಿಸಲಾಗಿದೆ. ಅಲ್ಲದೆ ಪ್ರಬುದ್ಧ ಸಂಶೋಧಕರಿಗೆ ಫೆಲೋಶಿಪ್ ನೀಡಿ 10 ಮೌಲಿಕ ಗ್ರಂಥಗಳನ್ನು 2 ಸಿದ್ಧಪಡಿಸಲಾಗಿದೆ. ಇವುಗಳನ್ನು ಪ್ರಕಟಿಸಿದೆ ಇರುವುದು ಅಧ್ಯಕ್ಷ ಕಜೆಗದ್ದೆ ಲಕ್ಷ್ಮೀನಾರಾಯಣರವರ ದುರುದ್ದೇಶ ಎಂದರು.

ಡಾ| ಹೂವಪ್ಪ ಕಣಿಯೂರು ಅವರನ್ನು ಮೌಲ್ಯಮಾಪಕರನ್ನಾಗಿ ನೇಮಕ ಮಾಡಿ, ಫೆಲೋಶಿಪ್, ಅಧ್ಯಯನ ಗ್ರಂಥಗಳ ಪ್ರಕಟಣೆಯನ್ನು ತಡೆಹಿಡಿದಿರುವ ನಿರ್ಧಾರವನ್ನು ಸಮರ್ಥಿಸುತ್ತಿರುವುದು ಆಕಾಡೆಮಿಯ ಧೈಯೋದ್ದೇಶಗಳಿಗೆ ವ್ಯತಿರಿಕ್ತವಾಗಿದೆ. ಅಲ್ಲದೇ ಮೌಲ್ಯಮಾಪನದ ಶರತ್ತು ಆಕಾಡೆಮಿಯು, ಸಂಶೋಧಕರೊಂದಿಗೆ ಮಾಡಿಕೊಂಡ ಒಪ್ಪಂದದಲ್ಲಿರುವುದಿಲ್ಲ. ಮೌಲ್ಯಮಾಪನ ಮಾಡಿ ಪದವಿ ನೀಡಲು ಆಕಾಡೆಮಿಯು ವಿಶ್ವವಿದ್ಯಾನಿಲಯವಲ್ಲ, ಸದ್ರಿ ಅಧ್ಯಯನಕ್ಕಾಗಿ ತಲಾ ರೂ.75,000/- ರಂತೆ ಒಟ್ಟು 7,50,000 ರೂಪಾಯಿಗಳನ್ನು ಅಕಾಡೆಮಿಯು ಖರ್ಚು ಮಾಡಿದ್ದು, ಅದು ಈಗ ವ್ಯರ್ಥ ಮಾಡಿದಂತೆ ಆಗಿರುತ್ತದೆ. ಹಾಗಾಗಿ ಈ ಮೂಲಕ ನಾವು ಅಕಾಡೆಮಿಯ ಕಪಾಟಿನಲ್ಲಿ ಕೊಳೆಯಲು ಬಿಟ್ಟಿರುವ ಮೌಲಿಕ ಸಂಶೋಧನಾ ಕೃತಿಗಳನ್ನು ಅಕಾಡೆಮಿಯು ತಕ್ಷಣವೇ ಪ್ರಕಟಿಸುವಂತೆ ಒತ್ತಾಯಿಸುತ್ತೇವೆ. ಈ ಮೂಲಕ ಆಕಾಡೆಮಿಯು ಜವಾಬ್ದಾರಿಯುತವಾಗಿ ನಡೆದುಕೊಂಡು ತನ್ನ ಉದ್ದೇಶವನ್ನು ಕಾಯ್ದುಕೊಳ್ಳಬೇಕು. ಹಾಲಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಡೆಗದ್ದೆಯವರು ಇತರ ಸಹಸದಸ್ಯರನ್ನು ಸರ್ವಾಧಿಕಾರಿಯಂತೆ ನಡೆಸಿಕೊಳ್ಳುತ್ತಿರುವುದಾಗಿ ತಿಳಿದುಬಂದಿದೆ. ಅಕಾಡೆಮಿಯು ಅರೆಭಾಷೆ ಪದಕೋಶ ಮತ್ತು ವಿಶ್ವಕೋಶದ ರಚನೆಯ ಯೋಜನೆಯನ್ನು ಆರಂಭಿಸಿದ್ದರೂ ಅದು ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ, ಲಕ್ಷಾಂತರ ರೂಪಾಯಿ ವೆಚ್ಚವಾಗಿದ್ದು, ಆಪಾರ ಪ್ರಮಾಣದ ಹಣ ಸೋರಿಕೆಯಾಗಿರುವ ದೂರುಗಳಿವೆ, ಆರಂಭದಲ್ಲಿದ್ದ ಪದಕೋಶದ ಸಂಚಾಲಕರಾದ ಡಾ| ಪುರುಷೋತ್ತಮ ಕರಂಗಲ್ಲು ರವರನ್ನು ಬದಲಾಯಿಸಿರುವುದು ಡಾ| ವಿಶ್ವನಾಥ ಬದಿಕಾನ ರವರ ಕುಮ್ಮಕ್ಕಿನಿಂದ ಎಂಬ ಅಭಿಪ್ರಾಯವಿದೆ, ಆರೆಭಾಷೆ ಅಕಾಡೆಮಿಯನ್ನು ನಾಟಕ ಕಂಪೆನಿಯನ್ನಾಗಿಸಿ ಅಪಾರ ಮೊತ್ತದ ಹಣ ದುರುಪಯೋಗವಾಗಿ ಕೆಲವರಿಗೆ ಗಂಜಿ ಕೇಂದ್ರದಂತಾಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಹಾಲಿ ಅಧ್ಯಕ್ಷರನ್ನು ಸರಕಾರವು ತಕ್ಷಣ ವಜಾಗೊಳಿಸಿ ನೂತನ ಅಧ್ಯಕ್ಷರನ್ನು ನೇಮಕ ಮಾಡುವಂತೆ ಒತ್ತಾಯಿಸಿದರು.

ತೇಜಕುಮಾರ್ ಬಡ್ಡಡ್ಕ ಮಾತನಾಡಿ ಮೂರು ವರ್ಷವಾಗುತ್ತಾ ಬಂದರೂ ಪುಸ್ತಕ ಮುದ್ರಣ ತಡೆಹಿಡಿಯಲಾಗಿದೆ. ಸಾಹೇಬ್ರು ಬಂದವೇ ಅರೆಬಾಸೆ ನಾಟಕಕ್ಕೆ 10ಲಕ್ಷ ಖರ್ಚು ಮಾಡಿದ್ದಾರೆ. ಅಕಾಡೆಮಿಯ ಮೂಲ ಉದ್ದೇಶ ಬಿಟ್ಟು ನಾಟಕಕ್ಕೆ ಅನಗತ್ಯ ವೆಚ್ಚ ಮಾಡಲಾಗಿದೆ. ಇದರಲ್ಲಿ ರಿಜಿಸ್ಟಾರ್ ಅವರದ್ದು ತಪ್ಪಾಗಿದೆ, ಮೂಲ ಉದ್ದೇಶ ಗೊತ್ತಿರಬೇಕು. ಅವ್ಯವಹಾರ ನಡೆದಿದ್ದು ಈ ಬಗ್ಗೆ ಇಲಾಖಾ ತನಿಖೆಯಾಗಬೇಕು. ಪುಸ್ತಕ ಮುದ್ರಣ ಮಾಡದಿದ್ದರೇ ನಾವು ಹೋರಾಟ ಮಾಡುತ್ತೇವೆ ಎಂದರು.‌ ಗೋಷ್ಠಿಯಲ್ಲಿ ಯತೀಂದ್ರ ಕೆದಂಬಾಡಿ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!