ಆರಂತೋಡು – ಎಲಿಮಲೆ ರಸ್ತೆ ಅಭಿವೃದ್ಧಿಗೆ ಅಗ್ರಹಿಸಿ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಕೆ ಬಗ್ಗೆ ಅಮರ ಸುದ್ದಿ ವರದಿ ಪ್ರಕಟಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಆರಂತೋಡು ಶಕ್ತಿ ಕೇಂದ್ರದ ಪ್ರಮುಖ ಹಾಗೂ ಗ್ರಾ.ಪಂ.ಸದಸ್ಯ ಕೇಶವ ಅಡ್ತಲೆ ನಾಗರಿಕರ ಬಹು ವರ್ಷ ಗಳ ಬೇಡಿಕೆ ನಿಜವಾಗಿಯೂ ನ್ಯಾಯ ಸಮ್ಮತವಾಗಿದೆ. ಪಕ್ಷದ ಕಡೆಯಿಂದ ಈ ಬಗ್ಗೆ ವಿಶೇಷವಾಗಿ ಬಿ.ಜೆ. ಪಿ. ಮಂಡಲ ಸಮಿತಿಯ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ ಯವರು ವಿಶೇಷ ಮುತುವರ್ಜಿ ವಹಿಸಿ ಸರಕಾರ ಮತ್ತು ಸಚಿವರಿಗೆ ಈ ರಸ್ತೆಯ ಅಭಿವೃದ್ಧಿಯ ಬಗ್ಗೆ ವಿಶೇಷ ಗಮನಹರಿಸುವಂತೆ ಮನವರಿಕೆ ಮಾಡಿದ್ದರು. ಬಿಡುಗಡೆಗೊಂಡ 50 ಕೋಟಿ ಅನುದಾನದಲ್ಲಿ ಸಚಿವರು ಈಗಾಗಲೇ ಆರಂತೋಡು ಎಲಿಮಲೆ ರಸ್ತೆಗೆ 1ಕೋಟಿ ನೀಡಿದ್ದು ಸದ್ಯದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ. ಹಾಗೂ ವಿಶೇಷ ಅನುದಾನ ದಲ್ಲಿ 2.45ಕೋಟಿ ಬಿಡುಗಡೆ ಪ್ರಕ್ರಿಯೆ ಕೊನೆ ಹಂತ ದಲ್ಲಿದ್ದು ಅದು ಶೀಘ್ರದಲ್ಲಿ ಬಿಡುಗಡೆ ಕೊಳ್ಳಲಿದೆ. ಸಚಿವ ಅಂಗಾರರು ಅಡ್ತಲೆ ವಾರ್ಡಿನ ಸಂಪರ್ಕ ರಸ್ತೆ ಗಳಿಗೆ ವಿಶೇಷವಾಗಿ ಆಸಕ್ತಿ ವಹಿಸಿ ಕಳೆದ 5ವರ್ಷದಲ್ಲಿ 1ಕೋಟಿಗೂ ಹೆಚ್ಚು ರಸ್ತೆ ಕಾಂಕ್ರಿಟೀಕರಣಕ್ಕೆ ಅನುದಾನ ನೀಡಿದುದಲ್ಲದೆ ಅಡ್ತಲೆ-ಬೆದ್ರುಪಣೆ ಪಂಚಾಯತ್ ರಸ್ತೆಗೆ ಸುಮಾರು 30ಲಕ್ಷ, ಹಾಸ್ಪರೆ- ಕಲ್ಲುಗುಡ್ಡೆ ರಸ್ತೆಗೆ 10ಲಕ್ಷ, ಪಿಂಡಿಮನೆ- ಅರಮನೆಗಯ ರಸ್ತೆ 10ಲಕ್ಷ ಅನುದಾನ ಬಿಡುಗಡೆ ಮಾಡಿದ್ದು ಸದ್ಯದಲ್ಲಿ ಈ ಎಲ್ಲಾ ಕಾಮಗಾರಿ ಗಳು ಆರಂಭಗೊಳ್ಳಲಿದೆ. ಆದುದರಿಂದ ಅಡ್ತಲೆ ವಾರ್ಡ್ ಪ್ರಜ್ಞಾವಂತ ನಾಗರಿಕರು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾದ ಮತದಾನ ಬಹಿಷ್ಕಾರದಂತಹ ನಿರ್ಧಾರದಿಂದ ಹಿಂದೆ ಸರಿದು ಸಹಕರಿಸಬೇಕೆಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
- Saturday
- November 23rd, 2024