ಸುಳ್ಯ ಸಿ ಎ ಬ್ಯಾಂಕ್ ಅಧ್ಯಕ್ಷರಾಗಿ ಎಂ.ಬಾಲಗೋಪಾಲ ಸೇರ್ಕಜೆ ಆಯ್ಕೆಯಾಗಿದ್ದಾರೆ. ಸಿಎ ಬ್ಯಾಂಕ್ ಅಧ್ಯಕ್ಷರಾಗಿದ್ದ ಹರೀಶ್ ಬೂಡುಪನ್ನೆ ರಾಜಿನಾಮೆ ನೀಡಿದ ಕಾರಣ ತೆರವಾದ ಸ್ಥಾನಕ್ಕೆ ಇಂದು ಬಾಲಗೋಪಾಲ ಸೇರ್ಕಜೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ನಿರ್ದೇಶಕರಾದ ದಾಮೋದರ ಮಂಚಿ ಸೂಚಿಸಿ, ಅಬ್ದುಲ್ಲ ಕುಂಞಿ ನೇಲ್ಯಡ್ಕ ಅನುಮೋದಿಸಿದರು. ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಮಾರಾಟ ಅಧಿಕಾರಿ ಶೋಭಾ ಚುನಾವಣಾ ಅಧಿಕಾರಿಯಾಗಿದ್ದರು. ಸಿಎ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ ಸೂರ್ತಿಲ ಸಹಕರಿಸಿದರು. ಉಪಾಧ್ಯಕ್ಷ ವೆಂಕಟ್ರಮಣ ಮುಳ್ಯ, ನಿರ್ದೇಶಕರಾದ ಹರೀಶ್ ಬೂಡುಪನ್ನೆ, ಎ.ಎಸ್.ಮನ್ಮಥ, ನವೀನ್‌ಕುಮಾರ್ ಕೆ.ಎಂ., ವಾಸುದೇವ ನಾಯಕ್, ಹೇಮಂತ ಕೆ.ಆರ್, ಸುಮತಿ ರೈ, ಹರಿಣಿ ಸದಾನಂದ, ಅಬ್ದುಲ್ ಕುಂಞಿ ನೇಲ್ಯಡ್ಕ, ಶೀನಪ್ಪ ಬಯಂಬು,ದಾಮೋದರ ಮಂಚಿ, ಜಯರಾಮ ಪಿ.ಜಿ ಭಾಗವಹಿಸಿದ್ದರು. ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷ ಸುಬೋಧ್ ಶೆಟ್ಟಿ ಮೇನಾಲ, ತಾ.ಪಂ.ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಜಿನ್ನಪ್ಪ ಪೂಜಾರಿ, ಸೋಮನಾಥ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಮುಂದಿನ ಒಂದೂವರೆ ವರ್ಷಗಳ ಕಾಲ ಬಾಲಗೋಪಾಲ ಸೇರ್ಕಜೆ ಅಧ್ಯಕ್ಷರಾಗಲಿದ್ದಾರೆ. 2019 ಜನವರಿಯಲ್ಲಿ ಚುನಾವಣೆ ನಡೆದಿದ್ದು 2024 ಜನವರಿಯಲ್ಲಿ ಆಡಳಿತ ಮಂಡಳಿ ಅಧಿಕಾರ ಅವಧಿ ಪೂರ್ತಿಯಾಗಲಿದೆ. ಸಿಎ ಬ್ಯಾಂಕ್ ಆಡಳಿತ ಮಂಡಳಿಯ 13 ರಲ್ಲಿ 13 ಸ್ಥಾನ ಪಡೆದಿರುವ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಆಡಳಿತ ನಡೆಸುತಿದೆ. ಈ ಹಿಂದೆ ಆದ ಅಧಿಕಾರ ಹಂಚಿಕೆಯ ಒಪ್ಪಂದದಂತೆ ಹರೀಶ್ ಬೂಡುಪನ್ನೆ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಉಪಾಧ್ಯಕ್ಷರಾಗಿ ವೆಂಕಟ್ರಮಣ ಮುಳ್ಯ ಮುಂದುವರಿಯಲಿದ್ದಾರೆ.