ಯುವತಿ ಯೋರ್ವಳನ್ನು 2022 ಫೆ.17 ರಂದು ಪುಸುಲಾಯಿಸಿ ಕಾಣಿಯೂರು ಗ್ರಾಮದ ಬಂಡಾಜೆ ಎಂಬಲ್ಲಿರುವ ಗುಡ್ಡೆಗೆ ಕರೆದುಕೊಂಡು ಹೋಗಿ ಅವಳ ಮೇಲೆ ಅತ್ಯಾಚಾರ ಎಸಲಾಗಿದೆ ಎಂದು ಆರೋಪಿಸಿ ಸ್ಥಳೀಯ ಚಂದ್ರಶೇಖರ. ಎ ಎಂಬುವರನ್ನು ಬೆಳ್ಳಾರೆ ಪೊಲೀಸರು ಬಂಧಿಸಿ ಆರೋಪಿಯನ್ನು ಅತ್ಯಾಚಾರ ಆರೋಪದಡಿಯಲ್ಲಿ ಸುಳ್ಯ ನ್ಯಾಯಾಲಯಕ್ಕೆ ಹಾಜಾರು ಪಡಿಸಿದಾಗ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಈ ಮದ್ಯೆ ಆರೋಪಿಯನ್ನು ಜಾಮೀನಿನಲ್ಲಿ ಬಿಡುಗಡೆ ಮಾಡಬೇಕೆಂದು ಕೋರಿ ದಿನಾಂಕ 30/03/2022 ರಂದು ಸಂಬಂಧಪಟ್ಟ ಮಂಗಳೂರು ಜಿಲ್ಲಾ ಸೆಶನ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ದಾಖಲಿಸಿದ್ದರೂ ಜಾಮೀನು ಅರ್ಜಿಯನ್ನು ಸದ್ರಿ ನ್ಯಾಯಾಲಯವು ವಜಾ ಮಾಡಿತ್ತು. ಹಾಗಾಗಿ ಆರೋಪಿಯು ನ್ಯಾಯಾಂಗ ಬಂಧನದಲ್ಲಿ ಮುಂದುವರೆದಿದ್ದು, ಇದೀಗ ತನಿಖಾಧಿಕಾರಿಯು ಆರೋಪಿಯು ಜೈಲಿನಲ್ಲಿ ಇರುವುದರಿಂದ 90 ದಿನಗಳಲ್ಲಿ ದೋಷರೋಪಣ ಪಟ್ಟಿಯನ್ನು ಸಲ್ಲಿಸದ ಕಾರಣ ವಿಶೇಷ ಅರ್ಜಿಯನ್ನು ಆರೋಪಿ ಪರವಾಗಿ ಸುಳ್ಯ ನ್ಯಾಯಾಲಯದಲ್ಲಿ ದಾಖಲಿಸಿದ್ದು, ಸುಳ್ಯ ನ್ಯಾಯಲಯದ ಚಾರ್ಜ್ ನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ನೀಡಿದುದರಿಂದ ಸದ್ರಿ ಅರ್ಜಿಯ ವಾದ ವಿವಾದವನ್ನು ಆಲಿಸಿದ ಬೆಳ್ತಂಗಡಿ ನ್ಯಾಯಾಲಯದ ನ್ಯಾಯಾಧೀಶರು ಈ ಪ್ರಕರಣದಲ್ಲಿ ದೋಷರೋಪಣ ಪಟ್ಟಿಯನ್ನು ಕ್ಲಪ್ತ ಸಮಯದಲ್ಲಿ ತನಿಖಾಧಿಕಾರಿ ಸಲ್ಲಿಸಿಲ್ಲ ಎಂಬುದನ್ನು ಮನಗೊಂಡು ಆರೋಪಿಯ ಮೂಲಭೂತ ಹಕ್ಕನ್ನು ಕಡೆಗಣಿಸುವಂತಿಲ್ಲ ಎಂಬ ಕಾರಣವನ್ನು ನೀಡಿ ಆರೋಪಿಗೆ ಎರಡು ಜಾಮೀನುಗಳನ್ನು ನೀಡುವ ಶರ್ತದ ಮೇರೆಗೆ ಜಾಮೀನಿನಲ್ಲಿ ಬಿಡುಗಡೆಗೊಳಿಸಿ ಜೂ. 07ರಂದು ಆದೇಶ ನೀಡಿದ್ದಾರೆ. ಆರೋಪಿಗಳ ಪರವಾಗಿ ಸುಳ್ಯದ ನ್ಯಾಯವಾದಿಗಳಾದ ಯಂ. ವೆಂಕಪ್ಪ ಗೌಡ,ಚಂಪಾ ವಿ. ಗೌಡ, ರಾಜೇಶ್ ಬಿ.ಜಿ., ಶ್ಯಾಮ್ ಪ್ರಸಾದ್ ಹಾಗೂ ಮನೋಜ್ ರವರು ವಕಾಲತ್ತು ವಹಿಸಿದ್ದರು .
- Monday
- November 25th, 2024