ಕಳೆದ ಕೆಲವು ದಿನಗಳ ಹಿಂದೆ ಕೊರೋನ ಸೋಂಕಿತ ವೈದ್ಯರೊಬ್ಬರು ಅರಂತೋಡಿನಲ್ಲಿ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದು ,ಆ ಮನೆಯವರು ಅಂದು ಮದುವೆ ಮನೆ ಹಾಗೂ ಇತರೆಡೆ ಸಂಚರಿಸಿರುವ ಘಟನೆ ವರದಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅರಂತೋಡು ಗ್ರಾಮ ಪಂಚಾಯತ್ ವತಿಯಿಂದ ಮುಂಜಾಗೃತ ದೃಷ್ಟಿಯಲ್ಲಿ ಅರಂತೋಡು ಗ್ರಾಮದ ಒಂದು ಮತ್ತು ಎರಡನೇ ವಾರ್ಡಿನ ಎಲ್ಲಾ ವಾಣಿಜ್ಯ ವ್ಯವಹಾರಗಳನ್ನು ಜೂನ್ 4ರಿಂದ ಜೂನ್ 15ರವರೆಗೆ 2 ಗಂಟೆಯವರೆಗೆ ಮಾತ್ರ ನಡೆಸುವುದು. ಈ ವ್ಯಾಪ್ತಿಯಲ್ಲಿ ಬರುವ ಸಲೂನ್ ಗಳನ್ನು ಜೂನ್ 15ರವರೆಗೆ ಸಂಪೂರ್ಣವಾಗಿ ಮುಚ್ಚುವುದು. ಅಂಗಡಿ ಅಥವಾ ಹೋಟೆಲ್ಗಳಲ್ಲಿ ಕುಳಿತು ಆಹಾರ ಸೇವನೆ ಗಳನ್ನು ಮಾಡುವುದು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮತ್ತು ಆಹಾರಪದಾರ್ಥಗಳನ್ನು ಪಾರ್ಸೆಲ್ ಕೊಡುವ ವ್ಯವಸ್ಥೆಯನ್ನು ಮಾತ್ರ ಮಾಡುವುದು .ಅಂಗಡಿ ಹೋಟೆಲ್ಗಳಲ್ಲಿ ಮಸ್ಕ್ ಧರಿಸದ ಗ್ರಾಹಕರನ್ನು ಕಂಡುಬಂದಲ್ಲಿ ಅಂಗಡಿ ಅಥವಾ ಹೋಟೆಲ್ ಮಾಲೀಕರು ಜವಾಬ್ದಾರರು. ಅನಾವಶ್ಯಕವಾಗಿ ಅರಂತೋಡು ಪರಿಸರದಲ್ಲಿ ಸುತ್ತಾಡುವುದು ಕಂಡುಬಂದಲ್ಲಿ ಅವರ ಬಗ್ಗೆ ಪೊಲೀಸ್ ದೂರು ನೀಡುವುದು. ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ದ್ವಿತೀಯ ಸಂಪರ್ಕಿತರಿಗೆ ಹೋಂ ಕೋರಂ ಟೈನ್ ಮಾಡಲಾಗಿದ್ದು ಯಾರಾದರೂ ಇದನ್ನು ಉಲ್ಲಂಘಿಸಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ ಎಂದು ತಿಳಿದುಬಂದಿದೆ.
- Friday
- November 22nd, 2024