ಅಮರ ಸಂಘಟನಾ ಸಮಿತಿ, ಸುಳ್ಯ, ಇದರ ಆಶ್ರಯದಲ್ಲಿ , ಅರಣ್ಯ ಇಲಾಖೆ ಪಂಜ ಉಪವಲಯ, ದೇವಚಳ್ಳ ಗ್ರಾಮ ಪಂಚಾಯತ್ ಸಹಕಾರದೊಂದಿಗೆ 3 ನೇ ವರ್ಷದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಜೂ.05 ರಂದು ಮಾವಿನಕಟ್ಟೆ ಅರಣ್ಯದಲ್ಲಿ ಹಮ್ಮಿಕೊಳ್ಳಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಜನಿಕಾಂತ್ ಉಮ್ಮಡ್ಕವಹಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಲೋಚನಾ ದೇವ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಹಾರೈಸಿದರು.
ಗ್ರಾಮ ಪಂಚಾಯತ್ ಸದಸ್ಯ ಶೈಲೇಶ್ ಅಂಬೆಕಲ್ಲು ಅಮರ ಸಂಘಟನೆಯ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭಹಾರೈಸಿದರು. ವೆಂಕಟ್ರಮಣ, ಅರಣ್ಯ ವಿಕ್ಷಕರು ಅಮರಮುಡ್ನೂರು ಕಾರ್ಯಕ್ರಮಕ್ಕೆ ಶುಭಹಾರೈಸಿದರು, ದೇವಚಳ್ಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗುರುಪ್ರಸಾದ್, ಹರೀಶ್ ಮೆದು, ಜಗತ್ ಪಾರೆಪ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರದೀಪ್ ಬೊಳ್ಳೂರು ಪ್ರಾಸ್ತಾವಿಕವಾಗಿ ಮಾತನಾಡಿದರು, ರಕ್ಷಿತ್ ಉಬರಡ್ಕ ಸ್ವಾಗತಿಸಿ, ಕೇಶವ ಪ್ರಸನ್ನ ವಂದಿಸಿದರು. ಶ್ರೀಮತಿ ಸಾವಿತ್ರಿ ಕಣಿಮರಡ್ಕ ಕಾರ್ಯಕ್ರಮ ನಿರೂಪಿಸಿದರು.
ದೇವಚಳ್ಳ ಗ್ರಾಮದಲ್ಲಿ ಸುಮಾರು 175 ಗಿಡಗಳನ್ನು ನೆಡಲಾಯಿತು.