ನಿನ್ನೆಯ ದಿನ ಅರಂತೋಡಿನಲ್ಲಿ ನಡೆದ ಘಟನೆ ಈ ವಿಷಯಕ್ಕೆ ಪುಷ್ಟಿ ನೀಡುವಂತಿದೆ. ಬೇಲಿಯೇ ಎದ್ದು ಹೊಲ ಮೇದಂತೆಯೇ ಅಲ್ಲವೇ? ಕೊರೊನಾ ವೈರಸ್ ಎಷ್ಟೊಂದು ಭಯಾನಕ ಹಾಗೂ ಎಷ್ಟೊಂದು ಸಾಂಕ್ರಾಮಿಕ ಎಂದು ತಿಳಿದ ವೈದ್ಯರೇ ಏನೂ ತಿಳಿಯದ ಒಬ್ಬ ಪುಟ್ಟ ಬಾಲಕನಂತೆ ವರ್ತಿಸಿರುವುದು ವಿಪರ್ಯಾಸದ ಪರಮಾವಧಿ.
ಈ ಮಹಾಮಾರಿ ವೈರಸ್ಸಿನಿಂದ ದೇಶಕ್ಕೆ ದೇಶವೇ ತತ್ತರಿಸಿ ದಾರಿಕಾಣದೆ ನಿಂತಿರುವ ಸಂದರ್ಭದಲ್ಲಿ ವಿದೇಶದಿಂದ ಬಂದ ವೈದ್ಯರೊಬ್ಬರು ತಾನು ಕಾರಂಟೈನ್ ನಲ್ಲಿ ಇದ್ದರೂ ತಮ್ಮ ರಿಪೋರ್ಟ್ ಬರುವ ಮೊದಲೇ ಸಂಬಂಧಿಕರ ಸಂದರ್ಶನಕ್ಕೆ ಬಂದು ಇಡೀ ಪರಿಸರವನ್ನು ಆತಂಕಕ್ಕೆ ತಳ್ಳಿದ ಘಟನೆ ಸುಳ್ಯದ ಅರಂತೋಡಿನಿಂದ ವರದಿಯಾಗಿದೆ.
ಸುಳ್ಯ ತಾಲೂಕಿಗೆ ಸಂಬಂಧಿಸಿದಂತೆ ತಾಲೂಕು ಆಡಳಿತ ಮಹಾಮಾರಿಯ ವಿರುದ್ಧ ಹಲವಾರು ತಿಂಗಳುಗಳಿಂದ ಯಶಸ್ವಿ ಹೋರಾಟವನ್ನೇ ಮಾಡಿ ಬೇಷ್ ಎನಿಸಿದೆ.
ಆದರೆ ಹೊರ ದೇಶಗಳಿಂದ ಹೊರರಾಜ್ಯಗಳಿಂದ ಹೊರಜಿಲ್ಲೆಗಳಿಂದ ಕಣ್ಣುತಪ್ಪಿಸಿ ಈ ರೀತಿಯಾಗಿ ಬಂದು ತಾಲೂಕಿನಲ್ಲಿ ಹಬ್ಬಿಸಿದರೆ ಇದಕ್ಕೆ ಯಾರು ಹೊಣೆ ಎಂಬ ಮಾತು ಕೇಳಿಬರುತ್ತಿದೆ.
ಒಬ್ಬ ವ್ಯಕ್ತಿಗೆ ಯಾವುದೇ ತೊಂದರೆ ಇಲ್ಲದಿದ್ದರೂ ಸರ್ಕಾರದ ನಿರ್ದೇಶನದ ಮೇರೆಗೆ ಸಮಾಜದ ಹಿತರಕ್ಷಣೆಗೆ ಅವರನ್ನು ಕೊರಂಟ್ಯಾನಲ್ಲಿ ಇಡಲಾಗುತ್ತದೆ. ಇದರಿಂದ ತನಗೂ ಮತ್ತು ಇಡೀ ಸಮಾಜಕ್ಕೂ ಉಪಯೋಗ ವೆಂದು ತಿಳಿದು ಅದನ್ನು ಪಾಲಿಸುವುದು ಪ್ರತಿಯೊಬ್ಬನ ಆದ್ಯಕರ್ತವ್ಯ .ಇದನ್ನು ಬಿಟ್ಟು ಏನೂ ಇಲ್ಲ ಎಂಬ ಪೊಳ್ಳು ಭರವಸೆಯ ಮೇಲೆ ಅದನ್ನು ಉಲ್ಲಂಘಿಸಿ ಎಲ್ಲವನ್ನು ತಿಳಿದ ವೈದ್ಯರು ಈ ರೀತಿಯ ತಪ್ಪು ಮಾಡಿರುವುದು ಎಷ್ಟು ಸರಿ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇವರು ಕೊರಂಟೈನ್ ನಲ್ಲಿ ಇರುವ ವಿಷಯ ತಿಳಿದು ತಮ್ಮ ಮನೆಗೆ ಆಹ್ವಾನ ನೀಡಿರುವುದು ಸಂಬಂಧಿಕರ ತಪ್ಪು ಕೂಡ ಎದ್ದು ಕಾಣುತ್ತಿರುವುದು ಸುಳ್ಳಲ್ಲ.
- Sunday
- November 24th, 2024