ಅರಂತೋಡು ಶ್ರೀ ತಂಬುರಾಟಿ ಭಗವತಿ ಸೇವಾ ಸಮಿತಿಯ ವಾರ್ಷಿಕ ಮಹಾಸಭೆ ಮತ್ತು ನೂತನ ಸಮಿತಿಯ ರಚನೆಯು ಏ.9 ರಂದು ಪೆರಾಜೆ ಶ್ರೀ ಶಾಸ್ತಾ ವು ದೇವಸ್ಥಾನದ ವಠಾರದಲ್ಲಿ ಸಮಿತಿಯ ಉಪಾಧ್ಯಕ್ಷರಾದ ಶಿವರಾಮರವರ ಅದ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಶ್ರೀ ತಂಬೂರಾಟಿ ಭಗವತಿ ಕ್ಷೇತ್ರ ಕುತ್ತಿಕೋಲು ಇದರ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಶ್ರೀಧರನ್ ಪರಯಂಬಳ್ಳ,ಉಪಾಧ್ಯಕ್ಷರಾದ ಪವಿತ್ರನ್ ಗುಂಡ್ಯ,ಕ್ಷೇತ್ರ ದ ಕಾರ್ಯ ಕಾರಿ ಸಮಿತಿ ಸದಸ್ಯ ರಾದ ಪ್ರಭಾಕರನ್ ಮತ್ತು ಜತೆ ಕಾರ್ಯದರ್ಶಿ ಗೋಪಾಲನ್ ರವರು ಭಾಗವಹಿಸಿ ಮಾತನಾಡಿ ಮುಂದಿನ ವರ್ಷದಲ್ಲಿ ಶ್ರೀ ವಯನಾಟ್ ಕುಲವನ್ ದೈವಸ್ಥಾನ ಕುಂಬಳಚೇರಿ ಪೆರಾಜೆಯಲ್ಲಿ ನಡೆಸಲು ಉದ್ದೇಶಿಸಿರುವ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವಕ್ಕೆ ಸಂಬಂಧ ಪಟ್ಟಂತೆ ಸಮಿತಿಯ ಜವಾಬ್ದಾರಿಯ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರಲ್ಲದೆ ಕುತ್ತಿಕೋಲ್ ಕ್ಷೇತ್ರದಲ್ಲಿ ನಡೆಯಲಿರುವ ನವೀಕರಣ ಕಾರ್ಯದ ಬಗ್ಗೆ ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಶ್ರೀ ತಂಬೂರಾಟಿ ಭಗವತಿ ಕ್ಷೇತ್ರ ಕುತ್ತಿಕೋಲು ಇದರ ಅಧೀನಕ್ಕೆ ಒಳಪಡುವ ಆರಂತೋಡು, ತೊಡಿಕಾನ, ಪೆರಾಜೆ ಗ್ರಾಮಗಳನ್ನು ಒಳಗೊಂಡ ಶ್ರೀ ತಂಬೂರಾಟಿ ಭಗವತಿ ಸೇವಾ ಸಮಿತಿ ಅರಂತೋಡು ಇದರ ನೂತನ ಸಮಿತಿಯನ್ನು ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಶ್ರೀಜಿತ್ ಎ.ಜಿ. ಅರಂತೋಡು , ಕಾರ್ಯದರ್ಶಿಯಾಗಿ ಭಾನುಪ್ರಕಾಶ್ ಕೊಡಂಕೇರಿ ಕೋಶಾಧಿಕಾರಿಯಾಗಿ ಪ್ರದೀಪ್. ಕೆ ಅಂಗಡಿಮಜಲು, ಉಪಾಧ್ಯಕ್ಷರಾಗಿ ಬಿನು ಪೆರಾಜೆ, ಜತೆಕಾರ್ಯದರ್ಶಿಯಾಗಿ ದಾಮೋದರ ತೊಡಿಕಾನ, ಸದಸ್ಯರಾಗಿ ಅಂಬುಜಾಕ್ಷ, ಕುಂಞಕಣ್ಣ ಪೆರಾಜೆ, ರಾಜು ಅರ್ಲಡ್ಕ, , ರಕ್ಷಿತ್. ಕೆ.ಪಿ,ಗಣೇಶ್ ಕೊ ಡಂಕೇರಿ, ಸುಧೀರ್. ಬಿ. ಕೆ, ಸುಕುಮಾರ ಚಾಂಬಾಂಡು, ಬಾಲಕೃಷ್ಣ ಅಂಗಡಿಮಜಲು, ಪ್ರವೀಣ. ಕೆ ಪುರುಷೋತ್ತಮ ಕೊಡಂಕೇರಿ, ನವೀನ್ ಕೊಡಂಕೇರಿ, ಶ್ರೀನಾಥ್. ಎ. ಜಿ., ಸತೀಶ್ ತೊಡಿಕಾನ, ಶಿವರಾಮ, ಅಭಿಷೇಕ್, ಚೇತನ್,ಸುಪ್ರೀತ್ ಚಾಂಬಾಡು, ಕರುಣಾಕರ ಕಡೆಪಾಲರವರು ಆಯ್ಕೆಯಾದರು. ಶ್ರೀಜಿತ್ ರವರು ವರದಿ ವಾಚನ ಮತ್ತು ಲೆಕ್ಕಪತ್ರವನ್ನು ಮಂಡಿಸಿದರು. ಕಾರ್ಯದರ್ಶಿ ಭಾನುಪ್ರಕಾಶ್ ರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕುಮಾರಿ ತಜ್ಞಾ ಪ್ರಾರ್ಥಿಸಿದರು.