ಸುಳ್ಯ : ಸಾಹಿತ್ಯಗಳನ್ನು ಓದುವ ಮತ್ತು ಬರೆಯುವ ಹವ್ಯಾಸಗಳಿದ್ದರೆ ಉತ್ತಮ ಸಾಹಿತಿಗಳಾಗಬಹು ಉದಯೋನ್ಮುಖ ಸಾಹಿತಿಗಳು ಹೆಚ್ಚು ಓದುವ ಹವ್ಯಾಸ ರೂಡಿಸಿಕೊಳ್ಳಬೇಕು ಎಂದು ಉದಯೋನ್ಮುಖ ಸಾಹಿತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ಅಭಿಪ್ರಾಯಪಟ್ಟರು.
ಅವರು ಅಜ್ಜಾವರ ಚೈತನ್ಯ ಸೇವಾಶ್ರಮದ ಶ್ರೀ ಯೋಗೇಶ್ಬರಾನಂದ ಸರಸ್ಬತಿ ಸ್ವಾಮೀಜಿಯವರ 181 ನೇ ಕೃತಿ ‘ಸಾಧಕರಿಗೆ ಇರುವ ಸವಾಲುಗಳು’ ಎಂಬ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ತಮ್ಮ ವಿಶಿಷ್ಟ ಬರವಣಿಗೆಯ ಮೂಲಕ ಸ್ವಾಮಿಜಿಯವರು ಶ್ರೇಷ್ಠ ಸಾಧನೆ ಮಾಡಿದ್ದಾರೆ.
ಸಾಹಿತ್ಯದ ಕುರಿತು ಆಸಕ್ತಿ ಮತ್ತು ಅಭಿರುಚಿ ರೂಢಿಸಿಕೊಂಡಿದ್ದಲ್ಲಿ, ಪ್ರತಿಯೊಬ್ಬರು ಉತ್ತಮ ಸಾಹಿತ್ಯ ರಚಿಸಬಹುದು. ಸಾಹಿತ್ಯ ವೆಂದರೆ ನಮ್ಮ ಮನಸ್ಸಿನ ಭಾವನೆಗಳನ್ನು ಭಾಷೆಯ ಮೂಲಕ ಅಕ್ಷರಗಳ ರೂಪಕ್ಕಿಳಿಸುವುದು. ಅನ್ನದಾನ,ವಿದ್ಯಾದಾನ ,ಪುಸ್ತಕದಾನ ಮಾಡುವುದು ಅತ್ಯಂತ ಶ್ರೇಷ್ಠ ಕೆಲಸ ಸ್ವಾಮಿಜಿಯವರ ಈ ಸೇವೆ ಇತರರಿಗೆ ಮಾದರಿಯಾಗಲಿ ಎಂದು ಅವರು ಹೇಳಿದರು.
ಸ್ವಾಮಿಜಿಯವರು ಮಾತನಾಡಿ ಮಾನವರು ಸ್ವಚ್ಚ ಮನಸ್ಸನ್ನು ರೂಡಿಸಿಕೊಂಡು ಸಮಾಜದ ಹಿತಕ್ಕಾಗಿ ದುಡಿಯಬೇಕೆಂದರು.
ವೈದೆ ಸಾಯಿಗೀತಾ, ಪೇರಾಲು ಶಾಲಾ ಮುಖ್ಯ ಶಿಕ್ಷಕಿ ಸುನಂದ,ಕಲಾವಿದ ಸುಪ್ರಿತ್ ಮೋಂಟಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಆಶ್ರಮದ ಟ್ರಸ್ಟಿಗಳಾದ ಅನೀಲ್ ಬಿ.ವಿ, ಪ್ರಣವಿ,ಅಜ್ಜಾವರ ಮಹಿಳಾ ಮಂಡಲದ ಅಧ್ಯಕ್ಷೆ ಶಶ್ಮಿ ಭಟ್ ಉಪಸ್ಥಿತರಿದ್ದರು. ಇಂಜಿನಿಯರಿಂಗ್ ಕಾಲೇಜಿನ ಅನಿಲ್ ಬಿ.ವಿ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಈ ಸಂದರ್ಭದಲ್ಲಿ ದುರ್ಗಾಪೂಜೆ,ಭಜನಾ ಸತ್ಸಂಗ ಕಾರ್ಯಕ್ರಮ ನಡೆಯಿತು.
- Friday
- November 1st, 2024