Ad Widget

ರಂಗಮನೆಯಲ್ಲಿ ನಾಗೇಶ್ ರೈ ಗೆ ನುಡಿನಮನ

. . . . . . .

ಸುಳ್ಯ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ಇತ್ತೀಚೆಗೆ ನಮ್ಮನ್ನಗಲಿದ ಕಲಾಪೋಷಕ ಎನ್.ನಾಗೇಶ್ ರೈ ಯವರಿಗೆ ಆತ್ಮೀಯರಿಂದ ನುಡಿನಮನ ಕಾರ್ಯಕ್ರಮ ನಡೆಯಿತು.
ಸಾಹಿತಿ ಚಿಂತಕ ಡಾ. ಪ್ರಭಾಕರ ಶಿಶಿಲರವರು ದೀಪ ಪ್ರಜ್ವಲಿಸಿ ನುಡಿನಮನಕ್ಕೆ ಚಾಲನೆ ನೀಡಿ
” ಬಹಳಷ್ಟು ಜನರ ಹೃದಯ ಗೆದ್ದ ನಾಗೇಶ್ ರೈ ಓರ್ವ ಸಹೃದಯಿ,ಸಾಂಸ್ಕೃತಿಕವಾಗಿ ಮತ್ತು  ಡಿಟಿಪಿ ಟೈಪಿಂಗ್ ಕ್ಷೇತ್ರದಲ್ಲಿ ಅವರ ಕೊಡುಗೆ ಅಪಾರ,ತುಳು ಭಾಷೆಯ ಚಂದವನ್ನು ಅವರಲ್ಲೇ ಕೇಳಬೇಕು” ಎಂದರು. “ಒಬ್ಬ ವ್ಯಕ್ತಿ ತಾನು ಹೇಗೆ ಬದುಕಬೇಕೆಂಬುದಕ್ಕೆ ಮಾದರಿ ನಮ್ಮ ನಾಗೇಶ್ ರೈ” ಎಂದು ನ್ಯಾಯವಾದಿ ಕೆ.ಕೃಷ್ಣಮೂರ್ತಿ ನುಡಿದರು.”ಕಳೆದ 20 ವರ್ಷಗಳಿಂದ ರಂಗಮನೆ ಸಂಸ್ಥೆಯ ಗೌರವ ಸದಸ್ಯರಾಗಿದ್ದ ನಾಗೇಶ್ ಇಲ್ಲಿನ ಎಲ್ಲ ಚಟುವಟಿಕೆಗಳ ಹಿಂದಿನ ಶಕ್ತಿಯಾಗಿದ್ದರು.ಅವರ ಅಗಲುವಿಕೆ ತುಂಬಲಾರದ ನಷ್ಟ” ಎಂದು ಜೀವನ್ ರಾಂ ಸುಳ್ಯ ಹೇಳಿದರು. “ಒಂದು ಸಜ್ಜನ ಕುಟುಂಬದ ಸದಸ್ಯನನ್ನು ನಾವೆಲ್ಲ ಕಳಕೊಂಡಿದ್ದೇವೆ.ಯಾವುದೇ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳದೆ ತನ್ನ ವೃತ್ತಿ ಮತ್ತು ಪ್ರವೃತ್ತಿಯನ್ನು ಸಮಚಿತ್ತದಿಂದ ನಿಭಾಯಿಸುವ ಶಕ್ತಿ ನಾಗೇಶ್ ರಿಗಿತ್ತು,ನಾವೆಲ್ಲ ಅವರ ಕುಟುಂಬಕ್ಕೆ ಆತ್ಮವಿಶ್ವಾಸ ತುಂಬಬೇಕಿದೆ” ಎಂದು ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಹೇಳಿದರು.

ನ್ಯಾಯವಾದಿಗಳಾದ ಎನ್. ಜಯಪ್ರಕಾಶ್ ರೈ, ನಳಿನ್ ಕುಮಾರ್ ಕೋಡ್ತುಗುಳಿ, ಲ|ಪಿ. ಎಂ. ರಂಗನಾಥ್, ಲೈನ್ಕಜೆ ರಾಮಚಂದ್ರ, ಡಾ. ವಿದ್ಯಾಶಾರದಾ,ವೀರಪ್ಪ ಗೌಡ,ಗಂಗಾಧರ ರೈ ಮುಂತಾದವರು ನುಡಿನಮನ ಸಲ್ಲಿಸಿದರು.
ಬುದ್ಧ ನಾಯ್ಕ್,ದಿವಾಕರ ರೈ,ಸನತ್ ಕುಮಾರ್ ರೈ,ಸುಜನಾ ಸುಳ್ಯ,ಅಚ್ಚುತ ಅಟ್ಲೂರು,ಸದಾಶಿವ ರೈ ಬೆಳ್ಳಿಪ್ಪಾಡಿ,ಲ| ಜಯಂತ್ ರೈ,ಲ| ಶಶಿಧರ ಪಡ್ಪು,ಯತಿನ್ ಚೆಂಬು,ಭುವನ ಕುಂಬಳಚೇರಿ,ಕಲಾವಿದ ಅಶ್ವಿನ್,ನೋಣಪ್ಪ ಮಾಸ್ಟ್ರು,ರವೀಶ್ ಪಡ್ಡಂಬೈಲ್,ಮಮತಾ ರವೀಶ್,ಜಯಪ್ರಕಾಶ್ ಕುಕ್ಕೇಟಿ,ಅಮೃತ್ ಕುಕ್ಕೇಟಿ, ಗೋಪಾಲಕೃಷ್ಣ ನಡುಮನೆ ಮತ್ತು ಸುಳ್ಯ ಕೆಎಫ್ ಡಿಸಿಯ ನೌಕರರು ನುಡಿನಮನದಲ್ಲಿ ಭಾಗವಹಿಸಿ ನಾಗೇಶ್ ರೈಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ರಂಗ ನಿರ್ದೇಶಕ ಜೀವನ ರಾಮ್ ಸುಳ್ಯ ಕಾರ್ಯಕ್ರಮ ಸಂಘಟಿಸಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!