ಇತಿಹಾಸ ಪ್ರಸಿದ್ದವಾದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಹಿಂದೂ ದಾರ್ಮಿಕ ಭಾವನೆಗಳಿಗೆ ದಕ್ಕೆಯಾಗುವಂತಹ ವಸ್ತ್ರಗಳನ್ನು ಧರಿಸಿಕೊಂಡು ದೇಗುಲ ಪ್ರವೇಶಿಸುವುದು ಹಿಂದೂ ಧಾರ್ಮಿಕ ಭಾವನೆಗಳಿಗೆ ದಕ್ಕೆ ಉಂಟುಮಾಡುತ್ತಿದೆ. ಆದ್ದರಿಂದ ಶೀಘ್ರವೇ ದೇವಸ್ಥಾನದ ಆಡಳಿತ ಮಂಡಳಿಯು ಹಿಂದೂ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ದೇವಸ್ಥಾನ ಪ್ರವೇಶಿಸಬೇಕಾಗಿ ಭಕ್ತಾದಿಗಳಿಗೆ ಸೂಚನೆಯನ್ನು ನೀಡಬೇಕಾಗಿ ವಿನಂತಿ ಹಾಗೂ ಪಾಶ್ಚಿಮಾತ್ಯ ಹಾಗೂ ದೇಹದ ಅಂಗಾಂಗಳನ್ನು ಪ್ರದರ್ಶಿಸುವ ವಿಕೃತ ವಸ್ತ್ರಗಳನ್ನು ಧರಿಸಿಕೊಂಡು ಬರುವವರನ್ನು ನಿರ್ಬಂಧಿಸಬೇಕಾಗಿ ದೇವಸ್ಥಾನದ ಆಡಳಿತ ಮಂಡಳಿಗೆ ವಿಶ್ವ ಹಿಂದೂ ಪರಿಷತ್ ಭಜರಂಗದಳ ಸುಳ್ಯ ಪ್ರಖಂಡದ ವತಿಯಿಂದ ಅ.06 ರಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಿಂದೂ ಪರಿಷತ್ ಅದ್ಯಕ್ಷರಾದ ಸೋಮಶೇಖರ್ ಪೈಕ, ಸುಳ್ಯ ಪ್ರಖಂಡ ಸಹ ಕಾರ್ಯದರ್ಶಿ ಭಾನುಪ್ರಕಾಶ್ ಪೆರುಮುಂಡ, ಭಜರಂಗದಳ ಜಿಲ್ಲಾ ಸಹ ಸಂಚಾಲಕ್ ಲತೀಶ್ ಗುಂಡ್ಯ, ಪ್ರಖಂಡ ಸಹ ಸಂಚಾಲಕ್ ನವೀನ್ ಎಲಿಮಲೆ, ವಿಜ್ಞೇಶ್ ಸುಳ್ಯ, ಸುಬ್ರಹ್ಮಣ್ಯ ವಿಶ್ವ ಹಿಂದೂ ಪರಿಷತ್ ಅದ್ಯಕ್ಷರಾದ ಆಶೋಕ್ ಆಚಾರ್ಯ, ಕಾರ್ಯದರ್ಶಿ ಲಕ್ಷ್ಮೀಶ ಇಜ್ಜಿನಡ್ಕ, ಭಜರಂಗದಳ ಸಂಯೋಜಕ್ ಮಹೇಶ್ ಗುಡ್ಡೆಮನೆ, ಗೋರಕ್ಷಾ ಪ್ರಮುಖ್ ಜೀವನ್ ಕುಮಾರಧಾರ, ಬಾಲಕೃಷ್ಣ, ಸುನೀಲ್, ಹರೀಶ್ ಮತ್ತು ಕಾರ್ಯಕರ್ತರು ಮುಂತಾದವರು ಉಪಸ್ಥಿತರಿದ್ದರು.
(ವರದಿ :- ಉಲ್ಲಾಸ್ ಕಜ್ಜೋಡಿ)