ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಭೆಯು ಮರ್ದಾಳ ಗ್ರಾಮಪಂಚಾಯತ್ ಅದ್ಯಕ್ಷರಾದ ಹರೀಶ್ ಕೊಡಂದೂರು ಅವರ ಅಧ್ಯಕ್ಷತೆಯಲ್ಲಿ ಅ.05 ರಂದು ಮರ್ದಾಳ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಸಭೆಯಲ್ಲಿ ಆ ಭಾಗದ ರೈತರ ಬಗ್ಗೆ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ ಸಮಗ್ರ ಮಾಹಿತಿ ನೀಡಿದರು ಹಾಗೂ ಸರ್ಕಾರಿ ಅಧಿಕಾರಿಗಳ ಕೆಲವೊಂದು ತಪ್ಪು ನಿರ್ಣಯಗಳು ಮುಂದಿನ ದಿನಗಳಲ್ಲಿ ಈ ಭಾಗದ ರೈತರ ಮುಂದಿನ ತಲೆಮಾರು ನಿರ್ಗತಿಕರಾಗುವ ಅಪಾಯವನ್ನು ಸಭೆಯಲ್ಲಿ ಚರ್ಚಿಸಲಾಯಿತು. ಹಾಗೂ ಮುಂದಿನ ದಿನಗಳಲ್ಲಿ ಜನರ ನ್ಯಾಯುತ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮಾನ್ಯ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡುವುದು ಎಂದು ತೀರ್ಮಾನಿಸಲಾಯಿತು.
ಹಾಗೂ ಅದೇ ರೀತಿ
1) ಕಡಬ ತಾಲೂಕಿನ ಹಲವು ಗ್ರಾಮಗಳಲ್ಲಿ 50-60 ವರ್ಷಗಳಿಂದ ಕೃಷಿಯನ್ನು ಅವಲಂಬಿಸಿ ಜೀವನ ಸಾಗಿಸುತ್ತಿರುವ ರೈತರ ಜಮೀನುಗಳನ್ನು ಅಕ್ರಮ-ಸಕ್ರಮ ಅಡಿಯಲ್ಲಿ ಯಾವುದೇ ನಿಬಂಧನೆ ಇಲ್ಲದೇ ಹಕ್ಕುಪತ್ರ ಮಂಜೂರು ಮಾಡಬೇಕು.
2) ತಕ್ಷಣ ಹಕ್ಕುಪತ್ರ ವಂಚಿತರ ಜಮೀನುಗಳನ್ನು ಅಳತೆ ಮಾಡಿ ನಕ್ಷೆ ತಯಾರಿಸಬೇಕು.
3) ಹಕ್ಕುಪತ್ರ ವಂಚಿತ ರೈತರಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಬೇಕು.
4) ಕಡಬ ಪಟ್ಟಣ ಪಂಚಾಯತ್ ಘೋಷಣೆ ಆಗುವ ಮೊದಲು ಅಕ್ರಮ-ಸಕ್ರಮಕ್ಕೆ ಅರ್ಜಿ ಕೊಟ್ಟ ರೈತರ ಹಾಗೂ ನಿವೇಶನಕ್ಕಾಗಿ 94C ಅರ್ಜಿ ಕೊಟ್ಟವರ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಿ ಅವರಿಗೆ ಹಕ್ಕುಪತ್ರ ನೀಡಬೇಕು.
5) ಕಡಬ ತಾಲೂಕಿನಲ್ಲಿ ಪ್ರಮುಖ ನದಿಗಳು ಇದ್ದು ನೇತ್ರಾವತಿ, ಕುಮಾರಧಾರ, ಹೊಸ್ಮಠ ನದಿ ಹಾಗೂ ಹಲವಾರು ಚಿಕ್ಕಪುಟ್ಟ ನದಿಗಳು ಇದ್ದರೂ ಸಹ ಈ ಭಾಗದ ರೈತರಿಗೆ ಬೇಸಿಗೆ ಕಾಲದಲ್ಲಿ ನೀರಿಗೆ ಬರಗಾಲ ಉಂಟಾಗಿ ಪ್ರತೀವರ್ಷ ನೂರಾರು ಎಕರೆ ಕೃಷಿ ಭೂಮಿ ನೀರಿಲ್ಲದೇ ಒಣಗಿ ಹೋಗುತ್ತಿದ್ದು ಆದ್ದರಿಂದ ಈ ಭಾಗದ ರೈತರ ಕೃಷಿಗೆ ಸರಕಾರ ನೀರಾವರಿ ಸೌಲಭ್ಯ ಕಲ್ಪಿಸಬೇಕು.
6) ರೈತರು ಕಷ್ಟಪಟ್ಟು ಬೆಳೆದ ಫಸಲನ್ನು ಅತೀ ಹೆಚ್ಚು ಹಾನಿಗೊಳಿಸುತ್ತಿರುವ ಮಂಗಗಳಿಗೆ ಮಂಕಿ ಪಾರ್ಕ್ ನಿರ್ಮಿಸಿ ಕೃಷಿ ಹಾನಿ ತಪ್ಪಿಸಬೇಕು.
7) ಗ್ರಾಮಪಂಚಾಯತ್ ಮಟ್ಟದಲ್ಲಿ ನಿವೇಶನ ರಹಿತರಿಗೆ ಕಾಯ್ದಿರಿಸಿದ ಜಾಗವನ್ನು ನಿವೇಶನ ವಂಚಿತ ಕುಟುಂಬಗಳಿಗೆ ಆದಷ್ಟು ಶೀಘ್ರವಾಗಿ ಹಂಚಿಕೆ ಮಾಡಬೇಕು.
ಈ ಮೇಲಿನ 7 ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಮುಂದಿನ ದಿನಗಳಲ್ಲಿ ಕಡಬ ತಾಲೂಕು ಕಛೇರಿ ಮುಂದೆ ರೈತರ ಹಾಗೂ ವಸತಿ ರಹಿತರ ಬೃಹತ್ ಹಕ್ಕೊತ್ತಾಯ ಸಭೆಯನ್ನು ನಡೆಸುವುದು ಎಂದು ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ, ಮರ್ದಾಳ ಗ್ರಾಮಪಂಚಾಯತ್ ಅದ್ಯಕ್ಷರಾದ ಹರೀಶ್ ಕೊಡಂದೂರು, ಐತ್ತೂರು ಗ್ರಾಮಪಂಚಾಯತ್ ಮಾಜಿ ಅದ್ಯಕ್ಷರಾದ ಎಂ.ಪಿ.ಯೂಸುಫ್, ಐತ್ತೂರು ಗ್ರಾಮಪಂಚಾಯತ್ ಸದಸ್ಯರಾದ ಈರೇಶ್ ಗೌಡ, ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸದಸ್ಯರಾದ ಕುರಿವಿಳ ಕರ್ಮಾಯಿ, ಕಡಬ ತಾಲೂಕು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕರಾದ ಹರೀಶ್ ಕಲ್ಲುಗುಂಡಿ, ಶ್ರೀ ಕೃಷ್ಣ ಭಜನಾ ಮಂಡಳಿಯ ಅಧ್ಯಕ್ಷರಾದ ವಾಸುದೇವ ಬೈಪಡಿತ್ತಾಯ, ಸಾಮಾಜಿಕ ಕಾರ್ಯಕರ್ತರಾದ ತಿರುಮಲೇಶ್ವರ, ಕಡಬ ಹಿಂದೂ ಜಾಗರಣ ವೇದಿಕೆಯ ಕಾರ್ಯದರ್ಶಿ ಪ್ರಮೋದ್ ಕುಡಲ, ಶ್ರೀಮತಿ ಶಿಭಾ, ಪ್ರದೀಶ ಮಾಯಿಪಾಜೆ, ರಾಮಣ್ಣ ಗೌಡ ಪಾದೆಮಜಲು, ಗಣೇಶ ಗೌಡ ಬಸವಪಾಲು, ಸತೀಶ್ ಗೌಡ ಕೋಲಂಪಾಡಿ, ಪ್ರಶಾಂತ್ ಪಣಿಬೈಲು, ದೇರಣ್ಣ ಗೌಡ ಮುಂತಾದ 50ಕ್ಕೂ ಹೆಚ್ಚು ಜನರು ಉಪಸ್ಥಿತರಿದ್ದರು.
(ವರದಿ :- ಉಲ್ಲಾಸ್ ಕಜ್ಜೋಡಿ)