ಐವರ್ನಾಡು: ಪಶು ವೈದ್ಯಕೀಯ ಸೇವಾ ಇಲಾಖೆ ಸುಳ್ಯ, ಐವರ್ನಾಡು ಗ್ರಾಮ ಪಂಚಾಯತ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಐವರ್ನಾಡು ಹಾಗೂ ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇವರ ಸಹಯೋಗದಲ್ಲಿ “ಆಚಾದಿ ಕಾ ಅಮೃತ್ ಮಹೋತ್ಸವ ಪ್ರಯುಕ್ತ ನಾಯಿಗಳಿಗೆ ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮವು ಆ.23 ರಂದು ಐವರ್ನಾಡಿನಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ ಅವರು ಲಸಿಕಾ ವಿತರಣೆಯ ಉದ್ಘಾಟನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಮನ್ಮಥ, ರೋಟರಿ ಕ್ಲಬ್ ಬೆಳ್ಳಾರೆ ಟೌನ್ ನ ವಿನಯ ಕುಮಾರ್ , ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸುಜಾತ ಪವಿತ್ರಮಜಲು, ಪಶು ವೈದ್ಯಾಧಿಕಾರಿ ಡಾ.ಸೂರ್ಯನಾರಾಯಣ ಭಟ್ ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್ ಸ್ವಾಗತಿಸಿ, ವಂದಿಸಿದರು.
ನಂತರ ಪಂಚಲಿಂಗೇಶ್ವರ ದೇವಸ್ಥಾನ ಬಳಿ, ಬಾಂಜಿಕೋಡಿ ಸ.ಹಿ.ಪ್ರಾ.ಶಾಲಾ ಬಳಿ ಗಂಟೆ, ನಿಡುಬೆ ಕಿ.ಪ್ರಾ.ಶಾಲಾ ಬಳಿ, ಪಾಲೆಪ್ಪಾಡಿ ಅಂಗನವಾಡಿ ಬಳಿ ,ದೇವರಕಾನ ಹಾಲು ಸೊಸೈಟಿ ಬಳಿ ಸೇರಿದಂತೆ ಒಟ್ಟು ಸುಮಾರು 225 ನಾಯಿಗಳಿಗೆ ಲಸಿಕೆ ನೀಡಲಾಯಿತು.