Ad Widget

ಹಂದಿಗೆಂದು ಇಟ್ಟ ಉರುಳಿನಲ್ಲಿ ಸೆರೆಯಾದ ಚಿರತೆ- ಯಶಸ್ವಿ ಕಾರ್ಯಾಚರಣೆ

. . . . . . . . .

ಪೆರುವಾಜೆ: ಪೆರುವಾಜೆ ಗ್ರಾಮದ ಕಾನಾವು ಎಂಬಲ್ಲಿ ಚಿರತೆಯೊಂದು ಉರುಳಿಗೆ ಬಿದ್ದ ಘಟನೆ ಆ.11 ರಂದು ವರದಿಯಾಗಿದೆ.
ಅರಣ್ಯ ಪ್ರದೇಶದಲ್ಲಿ ಯಾರೋ ಹಂದಿಗೆ ಇಟ್ಟ ಉರುಳಿಗೆ ಚಿರತೆ ಬಿದ್ದಿದ್ದು ಬೆಳಗ್ಗೆ ವೇಳೆ ಹಂದಿ ಬದಲು ಚಿರತೆ ಕಂಡು ಸ್ಥಳಿಯರು ಬೆಚ್ಚಿ ಬಿದ್ದಿದ್ದಾರೆ.

. . . . . . .

ಬಳಿಕ ಪೆರುವಾಜೆ ವಲಯ ಅರಣ್ಯಾಧಿಕಾರಿ ಪ್ರಸಾದ್ ಕೆ.ಜೆ.ಮತ್ತು ಸಿಬ್ಬಂದಿ ವರ್ಗದವರು ಸ್ಥಳಕ್ಕಾಗಮಿಸಿದ್ದಾರೆ.
ಅರವಳಿಕೆ ತಜ್ಞರು ಬಂದು ಬಳಿಕ ಅರವಳಿಕೆ ಮದ್ದು ನೀಡಿ ಚಿರತೆಯನ್ನು ಹಿಡಿಯಲಾಗಿದೆ. ಬಳಿಕ ಬೋನಿನಲ್ಲಿ ಹಿಡಿದು ಪಶ್ಚಿಮ ಘಟ್ಟ ಪ್ರದೇಶಕ್ಕೆ ಒಯ್ಯಲಾಗಿದೆ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪುತ್ತೂರು, ಸುಳ್ಯ ಉಪವಿಭಾಗದ ಅರಣ್ಯಧಿಕಾರಿಗಳು ಈ ಕಾರ್ಯಾಚರಣೆಯಲ್ಲಿದ್ದರು ಪಾಲ್ಗೊಂಡಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading