Ad Widget

ಅರಂತೋಡು : ಶ್ರಮದಾನ – ರಸ್ತೆ ದುರಸ್ತಿ

. . . . . . . . .

ಅರಂತೋಡು ಗ್ರಾ.ಪಂ.ವ್ಯಾಪ್ತಿಯ ಉಕ್ರಜೆ ಪೂಜಾರಿಮನೆ ಕಿರ್ಲಾಯ ರಸ್ತೆಯ ದುರಸ್ತಿಯನ್ನು ಪಂಚಾಯತ್ ಸದಸ್ಯ ಪುಷ್ಪಾಧರ ಅವರ ನೇತೃತ್ವದಲ್ಲಿ ದಲ್ಲಿ ಶ್ರಮದಾನದ ಮೂಲಕ ಮಾಡಲಾಯಿತು. ಅವರು ಸ್ವತಃ ಬಿಳಿಯಾರು ಕಲ್ಲುಪಣೆ ಯಿಂದ ಟಿಪ್ಪರ್ ಮೂಲಕ ತುಂಡು ಕಲ್ಲು ತರಿಸಿ ಊರ ಯುವಕರನ್ನು ಸಂಘಟಿಸಿಕೊಂಡು ರಸ್ತೆಯ ದುರಸ್ಥಿ ಕೆಲಸದಲ್ಲಿ ಭಾಗಿಯಾದರು. ಪೂಜಾರಿಮನೆ ನೀರಿನ ಟ್ಯಾಂಕಿ ನಿಂದ ನೀರು ಪಡೆದುಕೊಳ್ಳಲು ಸಂಬಂಧಿಸಿ ಪಲಾನುಭವಿಗಳಿಗೆ ಮಾಹಿತಿ ನೀಡಿ ಸರಕಾರದ ಸವಲತ್ತುಗಳನ್ನು ಎಲ್ಲರೂ ಬಳಸಿಕೊಳ್ಳುವoತೆ ಈ ವೇಳೆ ಗ್ರಾ.ಪಂ‌.ಸದಸ್ಯ ಪುಷ್ಪಾಧರ ವಿನಂತಿಸಿದರು. ಶ್ರಮದಾನದಲ್ಲಿ ಗಣೇಶ್ ಕಿರ್ಲಾಯ, ಕಿಶೋರ್ ಮಾಸ್ಟರ್ ಕಿರ್ಲಾಯ, ರವಿಚಂದ್ರ ಮತ್ತು ಮಿಥುನ್ ಕಲ್ಲುಗದ್ದೆ, ಲೋಲಜಾಕ್ಷ ಮೇಲಡ್ತಲೆ, ಯಕ್ಷಿತ್ ಮತ್ತು ರಿತೇಶ್ ಮೇಲಡ್ತಲೆ, ಅನಿತ್ ರಾಜ್, ಹನಿತ್ ಮತ್ತು ದಾಮೋಧರ ಪೂಜಾರಿಮನೆ, ನಿವೃತ್ತ ಸೈನಿಕ ಲಿಂಗಪ್ಪ ಗೌಡ ಮೇಲಡ್ತಲೆ, ಸಾಗರ್ ಕಿರ್ಲಾಯ ಮೊದಲಾವರು ಶ್ರಮದಾನದಲ್ಲಿ ಭಾಗವಹಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading