ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಸಭೆ ಮೇ.27 ರಂದು ನಡೆಯಿತು. ಕೋವಿಡ್ ತುರ್ತು ಸಂದರ್ಭದ ಹಿನ್ನೆಲೆಯಲ್ಲಿ ಸದಸ್ಯರ ಅನುಕೂಲಕ್ಕಾಗಿ ಕೆಲವು ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಅಮರ ಮುಡ್ನೂರು ಮತ್ತು ಅಮರ ಪಡ್ನೂರು ಗ್ರಾಮದಲ್ಲಿ ವಾಸ್ತವ್ಯವಿದ್ದು ಪಡಿತರ ಚೀಟಿ ಹೊಂದಿಲ್ಲದ ಎಲ್ಲಾ ಬಡವರಿಗೆ, ಕೊರೊನಾ ವಾರಿಯರ್ ಆಗಿ ಕೆಲಸ ನಿರ್ವಹಿಸುತ್ತಿರುವ ಆಶಾಕಾರ್ಯಕರ್ತರಿಗೆ, ಶಾಲೆಗಳಲ್ಲಿ ಬಿಸಿಯೂಟ ತಯಾರಕರು ಮತ್ತು ಸಹಾಯಕರಿಗೆ ಕಿಟ್ ನೀಡುವ ಬಗ್ಗೆ, ಸುಳ್ಯ ತಾಲೂಕಿನಲ್ಲಿ ಅಂಬುಲೆನ್ಸ್ , ರಕ್ತ , ಮತ್ತು ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ನೇರವೇರಿಸುತ್ತಿರುವ ಸೇವಾ ಭಾರತಿ ಯವರಿಗೆ ಧನ ಸಹಾಯ ನೀಡುವ ಬಗ್ಗೆ, ಸಂಘದಿಂದ ಬೆಳೆಸಾಲ ಪಡೆದ ರೈತ ಸದಸ್ಯರಿಗೆ ಕೃಷಿ ಉತ್ಪನ್ನಗಳ ಮೇಲೆ ಅಡಮಾನ ಸಾಲ ನೀಡುವುದೆಂದು ಮತ್ತು ಈ ಸಾಲಕ್ಕೆ ರಿಯಾಯಿತಿಯನ್ನು 2021-22 ನೇ ವರ್ಷಕ್ಕೆ ನೀಡುವುದೆಂದು ತೀರ್ಮಾನಿಸಲಾಗಿದೆ. ವಾರದ ಪ್ರತಿ ಮಂಗಳವಾರ ಬೆಳಿಗ್ಗೆ 8 ರಿಂದ ಅಡಿಕೆ ಖರೀದಿ, ಪ್ರತಿ ಬುಧವಾರ ಬೆಳಿಗ್ಗೆ 8 ರಿಂದ ಕೊಕ್ಕೊ ಖರೀದಿಸುತೇವೆ. ವಾರದ ಎಲ್ಲಾ ದಿನಗಳಲ್ಲಿಯೂ ಬೆಳಗ್ಗೆ 7.00 ರಿಂದ 10.00 ರವರೆಗೆ ವ್ಯಾಪಾರ ವಿಭಾಗ ತೆರೆದಿರುತ್ತದೆ. ಜೀನಸು ವ್ಯಾಪಾರ, ಕೃಷಿ ಪರಿಕಾರಗಳು, ಮತ್ತು ರಸಗೊಬ್ಬರ ಮಾರಾಟ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷರು ತಿಳಿಸಿದ್ದಾರೆ. ಅಮರ ಮುಡ್ನೂರು ಮತ್ತು ಅಮರ ಪಡ್ನೂರು ಗ್ರಾಮದಲ್ಲಿ ವಾಸ್ತವ್ಯವಿದ್ದು ಪಡಿತರ ಚೀಟಿ ಹೊಂದಿಲ್ಲದ ಎಲ್ಲಾ ಬಡವರು
9980075553, 9480700588 ನಂಬರಿಗೆ ಫೋನ್ ಮಾಡಬೇಕಾಗಿ ವಿನಂತಿಸಿದ್ದಾರೆ.
- Thursday
- November 21st, 2024