ತಾಲೂಕಿನ 18 ರಿಂದ 44 ವರ್ಷದೊಳಗಿನ ವಿಕಲ ಚೇತನರಿಗೆ ಮೇ 28 ಮತ್ತು 29ರಂದು ಕೋವಿ ಶೀಲ್ಡ್ ಲಸಿಕೆ ನೀಡಲಾಗುವುದು ಸುಳ್ಯ ತಾಲೂಕು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ತಾಲೂಕಿನ ವಿವಿದೆಡೆ ಆಯ್ದ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಯಲಿದ್ದು ಫಲಾನುಭವಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಮಾಹಿತಿ ನೀಡಲಾಗಿದೆ. ಅಜ್ಜಾವರ ಮತ್ತು ಮಂಡೆಕೋಲು ಗ್ರಾಮದ ವಿಕಲಚೇತನರಿಗೆ ಅಡ್ಪಂಗಾಯ ಶಾಲೆಯಲ್ಲಿ, ಆಲೆಟ್ಟಿ, ಉಬರಡ್ಕ ಮಿತ್ತೂರು,ಜಾಲ್ಸೂರು ,ಕನಕಮಜಲು ಹಾಗೂ ನಗರ ಪಂಚಾಯತ್ ವ್ಯಾಪ್ತಿಯ ವಿಕಲಚೇತನರಿಗೆ ಸುಳ್ಯದ ಟೌನ್ ಹಾಲ್ ನಲ್ಲಿ, ಕೊಲ್ಲಮೊಗ್ರ, ಕಲ್ಮಕಾರು, ಹರಿಹರಪಲ್ಲತ್ತಡ್ಕ, ಬಾಳಗೋಡು ಮತ್ತು ಐನೆಕಿದು ಗ್ರಾಮದ ವಿಕಲವೇತನರಿಗೆ ಹರಿಹರಪಲ್ಲತ್ತಡ್ಕ ಪ್ರಾಥಮಿಕ ಶಾಲೆಯಲ್ಲಿ, ಅಮರಮುಡ್ನೂರು, ಬಾಳಿಲ,ಕಳಂಜ, ಕೊರಿಯಾಲ ಗ್ರಾಮದ ವಿಕಲಚೇತನರಿಗೆ ಕಳಂಜ ಸೊಸೈಟಿಯಲ್ಲಿ, ದೇವಚಳ್ಳ ಮಡಪ್ಪಾಡಿ, ನೆಲ್ಲೂರು ಕೆಮ್ರಾಜೆ, ಗುತ್ತಿಗಾರು, ಹಾಗೂ ನಾಲ್ಕೂರು ಗ್ರಾಮದ ವಿಕಲಚೇತನರಿಗೆ ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ, ಕಲ್ಮಡ್ಕ,ಪಂಜ, ಮುರುಳ್ಯ, ಎಡಮಂಗಲ ಗ್ರಾಮದ ವಿಕಲಚೇತನರಿಗೆ ಪಂಜ ಪ್ರಾ.ಆರೋಗ್ಯ ಕೇಂದ್ರದಲ್ಲಿ, ಸುಬ್ರಹ್ಮಣ್ಯ, ಏನೆಕಲ್ಲು, ಬಳ್ಪ,ಕೇನ್ಯ ಗ್ರಾಮದ ವಿಕಲಚೇತನರಿಗೆ ಸುಬ್ರಹ್ಮಣ್ಯ ಪ್ರಾ.ಆರೋಗ್ಯ ಕೇಂದ್ರದಲ್ಲಿ, ಅರಂತೋಡು, ಮರ್ಕಂಜ, ಸಂಪಾಜೆ ಹಾಗೂ ತೊಡಿಕಾನ ಗ್ರಾಮದ ವಿಕಲಚೇತನರಿಗೆ ಅರಂತೋಡು ಪ್ರಾ.ಆರೋಗ್ಯ ಕೇಂದ್ರದಲ್ಲಿ, ಬೆಳ್ಳಾರೆ, ಐವರ್ನಾಡು, ಪೆರುವಾಜೆ ಗ್ರಾಮದ ವಿಕಲಚೇತನರಿಗೆ ಬೆಳ್ಳಾರೆ ಪ್ರಾ.ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆ ವಿತರಣೆ ನಡೆಯಲಿದೆ.
- Saturday
- November 23rd, 2024