ಕೋವಿಡ್-19 ವೈರಸ್ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಕೊಲ್ಲಮೊಗ್ರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರ ಕೋವಿಡ್-19 ಹಾಗೂ ಇತರ ವೈಧ್ಯಕೀಯ ತುರ್ತು ಸೇವೆಗಳಿಗಾಗಿ ಕಲ್ಮಕಾರು ಗ್ರಾಮಪಂಚಾಯತ್ ಸದಸ್ಯರಾದ ಪುಷ್ಪರಾಜ್ ಪಡ್ಪು ಅವರ ವಾಹನವನ್ನು ಮೀಸಲಿರಿಸಲಾಗಿದೆ. ಈ ವಾಹನವು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದು ಇದರ ನಿರ್ವಹಣೆಯನ್ನು ಸೇವಾಭಾರತಿ ಕೊಲ್ಲಮೊಗ್ರ ಹಾಗೂ ಕೋವಿಡ್-19 ಕಾರ್ಯಪಡೆ ಕೊಲ್ಲಮೊಗ್ರ ನಿರ್ವಹಿಸಲಿದೆ. ಇದರ ಸಂಪೂರ್ಣ ವೆಚ್ಚವನ್ನು ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ನೀಡಲಿದ್ದು ಇಂದು ಬೆಳಗ್ಗೆ ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ವಾಹನದ ಅನುಮತಿ ಪತ್ರ ಹಾಗೂ 10 ಪಿ.ಪಿ.ಇ ಕಿಟ್ಟನ್ನು ಜಯಪ್ರಕಾಶ್ ಕೂಜುಗೋಡು ಇವರ ಮಾರ್ಗದರ್ಶನದಲ್ಲಿ ಕೋವಿಡ್-19 ಕಾರ್ಯಪಡೆ ಕೊಲ್ಲಮೊಗ್ರ ಇದರ ಸದಸ್ಯರಾದ ಹರಿಪ್ರಸಾದ್ ಮಲ್ಲಾಜೆ ಹಾಗೂ ಉದಯ ಶಿವಾಲ ಅವರಿಗೆ ಹಸ್ತಾಂತರಿಸಲಾಯಿತು.
✍ವರದಿ:-ಉಲ್ಲಾಸ್ ಕಜ್ಜೋಡಿ