Ad Widget

ಕೊರೊನ ಸಂಕಷ್ಟದಿಂದ ಹೊರಬರಲು ಸರಕಾರದ ಜೊತೆಗೆ ನಾವು ನಮ್ಮ ಕರ್ತವ್ಯ ಮಾಡಬೇಕಿದೆ

 ಕಣ್ಣಿಗೆ ಕಾಣದೇ ಬಂದಿರುವ ಈ ಕೊರೊನ ವೈರಸ್ ಮನುಷ್ಯನ ಜೀವನವನ್ನು ಹಾಳು ಮಾಡಿದೆ.  ಈ ವೈರಸನ್ನು ಹೋಗಲಾಡಿಸಲು ಲಾಕ್-ಡೌನ್ ಸೃಷ್ಟಿಯಾಗಿ ಇಂದು ಜನರಲ್ಲಿ ಅನೇಕ ರೀತಿಯ ಬದಲಾವಣೆಯನ್ನು ಕಾಣುತ್ತಿದ್ದೇವೆ. ಒಂದು ಕಡೆ ಲಾಕ್ ಡೌನ್ ಇನ್ನೊಂದು ಕಡೆ ಕೊರೊನ ವೈರಸ್ ಆತಂಕ. ಇವೆರಡು ಮನುಷ್ಯರಲ್ಲಿ ಭಯದ ವಾತಾವರಣ ಉಂಟು ಮಾಡಿದೆ.  ವೈರಸ್ ಕಾಣಿಸಿಕೊಂಡು ಒಂದು ವರ್ಷ ಕಳೆದರೂ ಕೂಡ ಈ ವೈರಸ್ ಕಡಿಮೆಗೊಳ್ಳಲಿಲ್ಲ. ಈ ಕೋವಿಡ್ ರೋಗದ ವಿರುದ್ಧ ಭಾರತ ನಡೆಸಿದ ಸಮರದಲ್ಲಿ ಈ ಲಾಕ್ ಡೌನ್ ಸೃಷ್ಟಿಯಾಯಿತು. ಈ ಲಾಕ್ ಡೌನ್, ಮಾರ್ಗಸೂಚಿ ಸಮರ್ಪಕವಾಗಿ ಅನುಷ್ಠಾನ ಮಾಡಲು ಹಲವಾರು ಸಮಸ್ಯೆಗಳು ಎದುರಾಗಿವೆ.ಏಕೆಂದರೆ ದೊಡ್ಡ ಸಂಖ್ಯೆಯಲ್ಲಿಯೇ ಕೊರೊನ ವೈರಸ್ ಕಾಣಿಸಿಕೊಳ್ಳುತ್ತಿದೆ. ಸುಮಾರು ಒಂದು ವರ್ಷದಿಂದ ವಿಶ್ವಾದ್ಯಂತ ನಾಗರಿಕತೆಯನ್ನು ಕಾಡಿದ ಮತ್ತು ಇಂದಿಗೂ ಕಾಡುತ್ತಿರುವ ಕೋವಿಡ್ ಮಹಾಮಾರಿಯ ಬಗ್ಗೆ ಕೇಳದವರು ಯಾರು ಇಲ್ಲ. ಚೀನಾದಿಂದ ಹೊರಟ ಈ ರೋಗ ವಿಶ್ವವನ್ನೆಲ್ಲ ಸುತ್ತಿ ಸರಿಯಾಗಿ ಒಂದು ವರ್ಷದ ಹಿಂದೆ ಅಂದರೆ ಫೆಬ್ರವರಿ 2020 ರ ಹೊತ್ತಿಗೆ ಭಾರತವನ್ನು ಪ್ರವೇಶಿಸಿತು.                  ಕೊರೊನ ಪ್ರಾರಂಭಗೊಂಡ ಕೂಡಲೇ ಸರಕಾರವು ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳು ಜಾರಿಗೊಂಡವು. ದೇಶದ ಪ್ರಧಾನಿ ಮಂತ್ರಿಗಳಾದ ನರೇಂದ್ರ ಮೋದಿಯವರು 23 ಮಾರ್ಚ್ 2020 ರಂದು ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುತ್ತಾ, ದೇಶವನ್ನೇ ಸ್ತಬ್ದಗೊಳಿಸುವ ಲಾಕ್ ಡೌನ್ ಘೋಷಣೆ ಮಾಡಿದರು. ನಗರಗಳಲ್ಲಿ ಉದ್ಯೋಗಗಳು ಸ್ಥಗಿತಗೊಂಡವು.  ಎರಡನೇ ಅಲೆಯ ಕೊರೊನದಲ್ಲಿ ಎಪ್ರಿಲ್ 2021 ರಂದು ಲಾಕ್ ಡೌನ್ ಜಾರಿಯಾಯಿತು. ಆದರೆ ನಾವು ಸುರಕ್ಷಿತವಾಗಿ ಇರಬೇಕೆಂದರೆ ಸರಕಾರದ ನಿಯಮದಂತೆ ಎಲ್ಲರೂ ಪಾಲಿಸಬೇಕು.ಈ ಎಲ್ಲಾ ಸಾಧನೆಗಳು ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರು ಲಾಕ್ ಡೌನ್ ಘೋಷಿಸಿದಾಗ ರಾಷ್ಟ್ರೀಯ ಲಾಕ್ ಡೌನ್ನಿಂದ ಲಕ್ಷಾಂತರ ಮಂದಿ ಹಸಿವಿನಿಂದ ಬಳಲುತ್ತಾರೆ ಎಂಬ ಲೆಕ್ಕಾಚಾರಗಳನ್ನು ಮಾಡಲಾಯಿತು. ಸ್ವಾತಂತ್ರ್ಯೋತ್ತರ ಭಾರತವು ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿರಲಿಲ್ಲ. ಈ ಲಾಕ್ ಡೌನ್ ಸಮಯದಲ್ಲಿ  ಆಹಾರಕ್ಕೆ ಕಷ್ಟದ ಪರಿಸ್ಥಿತಿ ಇತ್ತು. ಅಂತಹ ಸಮಯದಲ್ಲಿ ನೆರವಿಗೆ ಬಂದದು ಸರ್ಕಾರ. ಹಾಗಾಗಿ ನಾವೆಲ್ಲರೂ ಸರಕಾರದ ನಿಯಮಗಳನ್ನು ಪಾಲಿಸಬೇಕು.ಕೊರೊನ ರೋಗದಿಂದ, ಲಾಕ್ ಡೌನ್ ಸಂದರ್ಭ ಮಾಡಿದ್ದು ಮಹತ್ವದ್ದಾಗಿದೆ. ಕೊರೊನ ರೋಗದ ವಿರುದ್ಧದ ಹೋರಾಟದಲ್ಲಿ ಭಾರತ ವಿಜ್ಞಾನ, ಸಂಶೋಧನೆ ಮತ್ತು ತಂತ್ರಜ್ಞಾನವನ್ನು ಪ್ರಾಥಮಿಕ ಅಸ್ತ್ರವಾಗಿ ಬಳಸಿತು.           ಯಾವುದೇ ಸಮಾಜ ತನ್ನವರಿಗಿಂತ ಮೊದಲು ಇನ್ನೋರ್ವರಿಗೆ ಸಹಾಯ ಮಾಡಲು ತನ್ನ ಅಮೂಲ್ಯ ವಸ್ತುಗಳನ್ನು ನೀಡುತ್ತಿದೆ ಎಂದಾದರೆ , ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮಾನವೀಯತೆ ತೋರುವ ಮತ್ತು ವಿಶ್ವದ ಯೋಗಕ್ಷೇಮವನ್ನು ಕೋರುವ ಭಾರತವನ್ನು ಅಭಿನಂದಿಸುತ್ತೇನೆ.    ತನ್ನ ಪ್ರಾಣವನ್ನೇ ಲೆಕ್ಕಿಸದೆ ಕೆಲವು ಮಂದಿ ಬೇರೆಯವರ ಪ್ರಾಣವನ್ನು ಕಾಪಾಡುತ್ತಾರೆ.ಭಾರತ ದೇಶ ಇತರ ದೇಶಗಳ ಬಗ್ಗೆಯೂ ಚಿಂತಿಸುತ್ತಿದೆ.ಅಲ್ಲದೆ ಕಷ್ಟ ಕಾಲದಲ್ಲಿ ನೆರವಿಗೆ ಬಂದಿದೆ. ❛ ನೆರೆಯವರು ಮೊದಲು❜ ಎಂಬ ಮಾತಿನಂತೆ ಭಾರತ ಈಗಾಗಲೇ ಅಧಿಕ ದೇಶಗಳಿಗೆ ಕೊರೊನ ಲಸಿಕೆಗಳನ್ನು ಕಳುಹಿಸಿಕೊಟ್ಟಿದೆ.ಇಂದು ನಮ್ಮ ದೇಶ ಕೇವಲ ತನ್ನ ಜನಗಳ ಸೇವೆಯನ್ನಷ್ಟೇ ಮಾಡುತ್ತಿಲ್ಲ. ಜೊತೆಗೆ ವಿಶ್ವದ ಇತರೆ ದೇಶಗಳ ಜನರ ಜೀವ ರಕ್ಷಣೆಯನ್ನು ಮಾಡುತ್ತಿದೆ.ಕೊರೊನಾವನ್ನು ತೊಲಗಿಸಲು ಇಂದು ದೇಶದಲ್ಲಿ ಪ್ರತಿಯೊಬ್ಬರೂ ತಮ್ಮ ಕೈಲಾದ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಅದರಲ್ಲೂ ವೈದ್ಯರು, ಪ್ಯಾರ ಮೆಡಿಕಲ್ ಸಿಬ್ಬಂದಿ, ಪೋಲಿಸ್ ಇಲಾಖೆ, ಗೃಹ ರಕ್ಷಕ ಇಲಾಖೆಯವರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಹೋರಾಡುತ್ತಿದ್ದಾರೆ.ನಮ್ಮ ಜೀವನವು ಸರಿಯಾಗಬೇಕಾದರೆ ಈ ವೈರಸ್ ಕಡಿಮೆಯಾಗಬೇಕು.ಆದ್ದರಿಂದ ಸರ್ಕಾರ ಹೇಳಿದಂತೆ ಪಾಲಿಸಿ.’ ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ’  ಎಂಬ ಸಂದೇಶ ಯಶಸ್ವಿಯಾಗಬೇಕೆಂದರೆ ಸರಕಾರಕ್ಕೆ ನಮ್ಮೆಲ್ಲರ ಸಹಕಾರ ಅಗತ್ಯ. ಭಾರತ ದೇಶದ ಜನಸಂಖ್ಯೆ ಹೆಚ್ಚು ಕಮ್ಮಿ 138 ಕೋಟಿ ಇರುವುದರಿಂದ ಸರಕಾರದಿಂದ ಮಾತ್ರ ಎಲ್ಲವೂ ಸಾಧ್ಯವಿಲ್ಲ ನಾವೂ ಕೈ ಜೋಡಿಸಬೇಕಿದೆ. ಲಾಕ್ ಡೌನ್ ಮತ್ತು ಕೊರೊನ ಬಗ್ಗೆ ಹೆಚ್ಚು ಭಯಕ್ಕೊಳಗಾಗದೆ, ನಮ್ಮ ಮನಸನ್ನು ಶಾಂತವಾಗಿಟ್ಟುಕೊಂಡು ನಿರ್ದಿಷ್ಟ ದಿನಚರಿಯನ್ನು ರೂಪಿಸಿಕೊಂಡು, ಅದನ್ನು ಪಾಲಿಸಿಕೊಂಡು, ಆರೋಗ್ಯಕರ ಆಹಾರ ಎಲ್ಲರೂ ಸೇವಿಸಿ, ನಮ್ಮ ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಬೇಕು.ಸರಕಾರ ಹೇಳಿದ ರೀತಿಯಿಂದಿದ್ದರೆ ಎಲ್ಲವೂ ಸಾಧ್ಯ ಹಾಗು ನಮ್ಮ ಮನಸ್ಸು ಮತ್ತು ದೇಹ ಗಟ್ಟಿಯಾಗಿದ್ದರೆ , ಕೊರೊನ ವಿರುದ್ಧ ಶಕ್ತಿಯುತವಾಗಿ ಹೋರಾಡಬಹುದು.   ಈ ದೇಶದ ಯಶಸ್ಸಿಗೆ ಸ್ವಾತಂತ್ರ್ಯೋತ್ತರ ಭಾರತವು ಮಾಡಿರುವ ಅನೇಕ ಕಾರ್ಯಕ್ರಮಗಳಲ್ಲಿರುವ ಯಶಸ್ಸು, ಸರಕಾರವು ತೆಗೆದುಕೊಂಡಿರುವ ದೃಢ ನಿರ್ಧಾರಗಳು , ಇದಕ್ಕೆ ಸಾಮಾನ್ಯರು ನೀಡಿದ ಸ್ಪಂದನೆ ಕಾರಣವಾಗಿದೆ.ನಾವು ಸುರಕ್ಷಿತವಾಗಿ ಇರಬೇಕೆಂದರೆ ಸರಕಾರದ ನಿಯಮದಂತೆ ಇರಬೇಕು. ದೇಶದ ಯೋಜನೆಗಳನ್ನು ಯಶಸ್ವಿಗೊಳಿಸೋಣ. ಆದ್ದರಿಂದ ಎಲ್ಲಾ ಜನರು ತಮ್ಮ ತಮ್ಮ ಮನೆಯಲ್ಲಿದ್ದು ನಿಮ್ಮ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

. . . . . .


ಬರಹ : ವೀಕ್ಷಾ ಕರಂಗಲ್ಲು,  ಸ.ಪ.ಪೂ ಕಾಲೇಜು ಗುತ್ತಿಗಾರು.  

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!