ಮುಖ್ಯಮಂತ್ರಿ ಯಡಿಯೂರಪ್ಪ ರವರು ಮತ್ತೆ 14 ದಿನಗಳ ಕಾಲ ರಾಜ್ಯದಲ್ಲಿ ಲಾಕ್ ಡೌನ್ ನಿರ್ಧಾರ ಕೈಗೊಂಡಿರುವುದು ಉತ್ತಮವಾಗಿದೆ. ಕೋವಿಡ್ ನಿಯಂತ್ರಣದಲ್ಲಿದ್ದರೂ ಸಂಪೂರ್ಣ ಹತೋಟಿಗೆ ತರುವಂತದ್ದು ಅನಿವಾರ್ಯವಾಗಿದೆ. ರಾಜ್ಯದ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಲಾಕ್ ಡೌನ್ ಅನಿವಾರ್ಯವಾಗಿದೆ. ಸರಕಾರಕ್ಕೆ ಲಾಕ್ ಡೌನ್ ನಿಂದ ನಷ್ಟ ಸಂಭವಿಸಿದ್ದರೂ, ಸರ್ಕಾರ ಜನತೆಯ ಆರೋಗ್ಯದ ಬಗ್ಗೆ ಚಿಂತಿಸುತ್ತಿದೆ. ಯಡಿಯೂರಪ್ಪನವರು ಯಾವಾಗಲೂ ರಾಜ್ಯದ ಜನತೆಯ ಪರವಾಗಿ ಇದ್ದಾರೆ. ಯಾವುದೇ ತೊಂದರೆಗಳು ಆಗದ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದಾರೆ. ಜನರಿಗೆ, ವ್ಯಾಪಾರ ವ್ಯವಹಾರಗಳಿಗೆ ತೊಂದರೆಯಾದರೂ ಸಹ ಈ ಸಂಧರ್ಭದಲ್ಲಿ ಸಹಕರಿಸಬೇಕಾಗಿರುವುದು ಜನತೆಯ ಆಧ್ಯ ಕರ್ತವ್ಯವಾಗಿದೆ.
ಜನರಿಗೆ ಪ್ರಯೋಜನ ಆಗುವ ರೀತಿಯಲ್ಲಿ ವಿಶೇಷ ಪ್ಯಾಕೇಜ್ ಗಳನ್ನು ಘೋಷಣೆ ಮಾಡಿದ್ದಾರೆ. ನಮ್ಮ ಸರ್ಕಾರವು ಜನತೆಯ ಜೊತೆ ನಿರಂತರವಾಗಿ ಇರುತ್ತದೆ ಎಂಬುದನ್ನು ಯಡಿಯೂರಪ್ಪನವರು ಹೇಳಿದ್ದಾರೆ.
ಪ್ರಸ್ತುತ ಕಾಲಘಟ್ಟದಲ್ಲಿ ನಮ್ಮ ಜೀವ ನಮ್ಮ ಕೈಯಲ್ಲಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿದರೆ ನಾವು ನಮ್ಮನ್ನು ಅರ್ಧ ರಕ್ಷಿಸಲು ಸಾಧ್ಯ. ಇನ್ನುಳಿದಂತೆ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಯ್ದಕೊಳ್ಳುವಿಕೆ, ಸ್ಯಾನಿಟೈಂಸಿಂಗ್ ಇತ್ಯಾದಿ ಮುಂಜಾಗ್ರತಾ ಕ್ರಮಗಳನ್ನು ನಾವು ಅಗತ್ಯವಾಗಿ ಪಾಲಿಸಬೇಕಾಗಿದೆ.
- Friday
- November 1st, 2024