ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ತುರ್ತು ಸೇವೆಗಳಿಗಾಗಿ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಮುತ್ತಪ್ಪ ಅವರು ತಮ್ಮ ಸ್ವಂತ ವಾಹನವನ್ನು ಮೀಸಲಿಡಲು ತೀರ್ಮಾನಿಸಿದ್ದಾರೆ.
ಮೇ.17 ರಂದು ಬಳ್ಪ ಗ್ರಾಮದ ಕ್ಯಾನ್ಸರ್ ರೋಗಿಗೆ ಆರೋಗ್ಯ ಸಮಸ್ಯೆ ಉಂಟಾಗಿ ಅವರನ್ನು ಮಂಗಳೂರಿನ ಎ.ಜೆ ಅಸ್ಪತ್ರೆಗೆ ಅಡ್ಮಿಟ್ ಮಾಡಲು ಕರೆದುಕೊಂಡು ಹೋಗಲು ಹಾಗೂ ಪೇಷಂಟ್ ಜೊತೆಗೆ ಅಸ್ಪತ್ರೆಯಲ್ಲಿ ನಿಲ್ಲಲು ರೋಗಿಯ ಸಂಬಂಧಿಯೊಬ್ಬರು ಕಲ್ಮಕಾರಿನಿಂದ ಬಳ್ಪಕ್ಕೆ ಹೋಗಬೇಕಾಗಿತ್ತು. ಆದರೆ ಲಾಕ್ ಡೌನ್ ನಿಂದಾಗಿ ಹೋಗಲು ಯಾವುದೇ ವಾಹನಗಳು ಇರಲಿಲ್ಲ. ಈ ವಿಷಯ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಸತೀಶ್.ಟಿ.ಎನ್ ಅವರ ಗಮನಕ್ಕೆ ಬಂದಿದ್ದು ಅವರು ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಮುತ್ತಪ್ಪ ಕಟ್ಟ ಅವರನ್ನು ಸಂಪರ್ಕಿಸಿದಾಗ ಕೂಡಲೇ ಸ್ಪಂದಿಸಿದ ಮುತ್ತಪ್ಪರವರು ರೋಗಿಯ ಸಂಬಂಧಿಯನ್ನು ಬಳ್ಪ ಕ್ಕೆ ತಲುಪಿಸಿದರು.
✍ವರದಿ :- ಉಲ್ಲಾಸ್ ಕಜ್ಜೋಡಿ