ಲಸಿಕೆ ಲಭ್ಯವಿಲ್ಲದ ಕಾರಣ ತಾಲೂಕು ಸಾರ್ವಜನಿಕ ಆಸ್ಪತ್ರೆಯ ವತಿಯಿಂದ ಕೆವಿಜಿ ಪುರಭವನದಲ್ಲಿ ನಡೆಯುತ್ತಿರುವ ಕೋವಿಡ್ ಲಸಿಕಾ ಕೇಂದ್ರದಲ್ಲಿ ನಾಳೆ(ಮೇ4) ಲಸಿಕಾ ಕಾರ್ಯಕ್ರಮ ಇರುವುದಿಲ್ಲ. ಯಾವುದೇ ಲಸಿಕೆ ಲಭ್ಯವಿಲ್ಲದ ಕಾರಣ ಲಸಿಕಾ ಕಾರ್ಯಕ್ರಮ ನಾಳೆ ಇರುವುದಿಲ್ಲ. ಕೋವಿಡ್ ಲಸಿಕೆ ಬಂದಾಗ ತಿಳಿಸಲಾಗುವುದು ಎಂದು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ. ಕೋವಿಡ್ ಪ್ರತಿರೋಧಕವಾಗಿ ನೀಡುವ ಕೋವ್ಯಾಕ್ಸಿನ್ ಕೆಲವು ದಿನಗಳಿಂದ ಲಭ್ಯತೆ ಇರಲಿಲ್ಲ. ಇದು ಎರಡನೇ ಹಂತದಲ್ಲಿ ಲಸಿಕೆ ನೀಡುವುದಕ್ಕೆ ತೀವ್ರ ಸಮಸ್ಯೆ ಎದುರಾಗಿತ್ತು. ಆದರೆ ಕೋವಿಶೀಲ್ಡ್ ಲಸಿಕೆ ಲಭ್ಯತೆ ಇತ್ತು. ಆದರೆ ಇದೀಗ ಯಾವುದೇ ಲಸಿಕೆ ಲಭ್ಯವಿಲ್ಲದ ಕಾರಣ ಕಾರ್ಯಕ್ರಮ ನಿಲ್ಲಿಸಬೇಕಾಗಿ ಬಂದಿದೆ. ಇದಕ್ಕೆಲ್ಲ ಯಾರು ಹೊಣೆ , ನಮ್ಮ ಸಚಿವರ ತಾಲೂಕಿನಲ್ಲಿಯೇ ಹೀಗಾದರೆ ಪರಿಸ್ಥಿತಿ ಹೇಗಿರಬಹುದು . ದಿನದಿಂದ ದಿನಕ್ಕೆ ಸುಳ್ಯದಲ್ಲಿ ಕೊರೊನ ಪ್ರಕರಣ ಜಾಸ್ತಿಯಾಗುತ್ತಿರುವ ಈ ಸಂದರ್ಭದಲ್ಲಿ ಸಚಿವರಾಗಿ ತಾವು ವಿಶೇಷ ಜವಾಬ್ದಾರಿ ತೆಗೆದುಕೊಂಡು ತಾಲೂಕಿನ ಎಲ್ಲಾ ಕಡೆಗಳಲ್ಲಿ ಲಸಿಕೆ ಕೊಡಿಸುವ ವ್ಯವಸ್ಥೆ ಮಾಡಿಸಿ ಎಂದು ಗ್ರಾಮ ಪಂಚಾಯತ್ ಸದಸ್ಯರಾದ ಧರ್ಮಪಾಲ ಕೊಯಿಂಗಾಜೆಯವರು ಸಚಿವ ಅಂಗಾರರನ್ನು ಒತ್ತಾಯಿಸಿರುತ್ತಾರೆ.
- Saturday
- November 23rd, 2024