ಜಿಲ್ಲಾ ಪಂಚಾಯತ್ , ತಾಲೂಕು ಪಂಚಾಯತ್ ಚುನಾವಣೆ ನಡೆಸಬೇಕೆನ್ನುಷ್ಟರಲ್ಲಿ ಕೊರೋನ ಸೊಂಕು ಹೆಚ್ಚಾದ ಕಾರಣ ಸರಕಾರ 6 ತಿಂಗಳ ಕಾಲ ಚುನಾವಣೆಯನ್ನು ಮುಂದೂಡಿದೆ. ಆದರೆ ಚುನಾವಣಾ ಆಯೋಗವು ತಾ.ಪಂ. ಜಿ.ಪಂ. ಕ್ಷೇತ್ರಗಳಿಗೆ ಮೀಸಲಾತಿ ನಿಗದಿ ಪಡಿಸುವ ಕಾರ್ಯದಲ್ಲಿ ತೊಡಗಿದೆ.
ಆಯಾ ಜಿಲ್ಲಾ ಪಂಚಾಯತ್ ಗಳ ಒಟ್ಟು ಸ್ಥಾನಗಳಲ್ಲಿ ಎಷ್ಟು ಸ್ಥಾನಗಳಲ್ಲಿ ಯಾವ ವರ್ಗಕ್ಕೆ ಎಷ್ಟು ಸೀಟು ಇರಬೇಕು ಎಂಬುದನ್ನು , ಅದೇ ರೀತಿ ತಾಲೂಕು ಪಂಚಾಯತ್ ಗಳಲ್ಲಿ ಯಾವ ಯಾವ ವರ್ಗಕ್ಕೆ ಎಷ್ಟೆಷ್ಟು ಸ್ಥಾನಗಳನ್ನು ಕಾದಿರಿಸಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಂಡಿದ್ದು ಅದನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿದೆ. ಅದರಂತೆ 42 ಜಿ.ಪಂ. ಸ್ಥಾನ ಹೊಂದಿರುವ ದ.ಕ. ಜಿ.ಪಂ. ನಲ್ಲಿ 21 ಮಂದಿ ಮಹಿಳೆಯರಿರುತ್ತಾರೆ. ಪರಿಶಿಷ್ಟ ಜಾತಿಗೆ 3 ಸ್ಥಾನಗಳನ್ನಿರಿಸಿದ್ದು ಅವುಗಳಲ್ಲಿ ಎರಡನ್ನು ಮಹಿಳೆಯರಿಗೆ ಕಾದಿರಿಸಲಾಗಿದೆ.
ಪರಿಶಿಷ್ಟ ಪಂಗಡಕ್ಕೆ ಮೀಸಿಟ್ಟಿರುವ ಎರಡು ಸ್ಥಾನಗಳಲ್ಲಿ ಒಂದು ಮಹಿಳೆಗೆ, ಹಿಂದುಳಿದ ವರ್ಗ ಎ ಗೆ ಮೀಸಲಾಗಿರುವ 11 ಸ್ಥಾನಗಳಲ್ಲಿ 6 ಸ್ಥಾನಗಳು ಮಹಿಳೆಯರಿಗೆ, ಹಿಂದುಳಿದ ವರ್ಗ ಬಿ ಗೆ ಮೀಸಲಿಟ್ಟರುವ ಮೂರರಲ್ಲಿ ಒಂದು ಮಹಿಳೆಗೆ ಹಾಗೂ ಯಾರು ಬೇಕಾದರೂ ಸ್ಪರ್ಧಿಸಬಹುದಾದ ಸಾಮಾನ್ಯವಾಗಿರುವ 23 ಕ್ಷೇತ್ರಗಳಲ್ಲಿ 11 ನ್ನು ಮಹಿಳೆಯರಿಗೆ ಕಾದಿರಿಸಲಾಗಿದೆ.
ಸುಳ್ಯ ತಾಲೂಕು ಪಂಚಾಯತ್ ನ 9 ಕ್ಷೇತ್ರಗಳಲ್ಲಿ ಒಂದು ಪ.ಜಾತಿಗೆ, ಒಂದು ಪ.ಪಂಗಡಕ್ಕೆ , 2 ಹಿಂ.ವರ್ಗ ಎ ಗೆ ( ಅವರಲ್ಲಿ ಒಬ್ಬರು ಮಹಿಳೆ ), 5 ಸ್ಥಾನ ಸಾಮಾನ್ಯಕ್ಕೆ ( ಅವರಲ್ಲಿ 2 ಕ್ಷೇತ್ರಗಳು ಮಹಿಳೆಯರಿಗೆ ಮೀಸಲು ) ನಿಗದಿಯಾಗಿದೆ.
- Thursday
- November 21st, 2024