ರಾಜ್ಯದಲ್ಲಿ ಈವರೆಗೆ 45 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡಲಾಗುತ್ತಿತ್ತು. ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಸಧ್ಯ 18ರಿಂದ 44 ವರ್ಷದವರಿಗೆ ಕೊರೋನಾ ಡೋಸ್ ಸಿಗುವುದು ಅನುಮಾನ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅಧಿಕೃತ ಮಾಹಿತಿ ನೀಡಿದ್ದಾರೆ
18 ವಯಸ್ಸಿನಿಂದ ದಿಂದ 44 ವಯಸ್ಸಾದವರು ಡೋಸ್ ಪಡೆಯಲು ಅರ್ಹರು. ಅದರ ಅನ್ವಯ 3ರಿಂದ ಮೂರುವರೆ ಕೋಟಿ ಜನ ರಾಜ್ಯದಲ್ಲಿ ಇದ್ದಾರೆ ಎಂಬ ಅಂದಾಜಿದೆ. ರಾಜ್ಯ ಸರ್ಕಾರ 400 ಕೋಟಿಗೆ 1 ಕೋಟಿ ಡೋಸ್ ಪಡೆಯಲು ಆರ್ಡರ್ ಮಾಡಿದೆ. ಹೈದ್ರಾಬಾದ್ ಮೂಲದ ಬಯೋಟೆಕ್, ರಷ್ಯಾ ಮೂಲದ ಸ್ಟೂಟ್ನಿಕ್, ರೆಡ್ಡಿ ಲ್ಯಾಬೋರೇಟಿ ಸಂಸ್ಥೆಗಳು ಡೋಸ್ ನೀಡಲಿದ್ದಾರೆ.
18 ರಿಂದ 44 ವಯಸ್ಸಿನವರು ಕೋವಿಡ್ ಪೋರ್ಟಲ್ ಮೂಲಕ ನೋಂದಣಿ ಮಾಡಿಸಿಕೊಳ್ಳಬಹುದು. ನಮಗೆ ಇನ್ನೂ ಡೆಲವರಿ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ಅಧಿಕೃತ ಮಾಹಿತಿ ನೀಡುವವರೆಗೆ ನೋಂದಣಿ ಮಾಡಿಕೊಂಡವರು ಯಾರೂ ಆಸ್ಪತ್ರೆಯ ಬಳಿ ಹೋಗಬಾರದು. ಅಧಿಕೃತವಾಗಿ ಆ ಕಂಪನಿಗಳು ತಿಳಿಸಿದ ಮೇಲಷ್ಟೇ ನಾವು ಪ್ರಕಟಣೆ ನೀಡುತ್ತೇವೆ ಎಂದಿದ್ದಾರೆ.