ಸುಳ್ಯದಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡುವ ಕೇಂದ್ರವನ್ನು ಜ್ಯೋತಿ ಸರ್ಕಲ್ ಬಳಿಯ ಸ.ಮಾ..ಹಿ.ಪ್ರಾ.ಶಾಲೆಯಿಂದ ಕೆ.ವಿ.ಜಿ. ಪುರಭವನಕ್ಕೆ ಸ್ಥಳಾಂತರ ಮಾಡಲಾಗಿದೆ. ಸುಳ್ಯದಲ್ಲಿ ಕೊರೊನ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಿದೆ ಎನ್ನಲಾಗಿದೆ. ಲಸಿಕೆ ನೀಡುವ ಮೊದಲು ನೋಂದಣಿ ಮಾಡಬೇಕಾಗಿದ್ದು ಸರ್ವರ್ ಸಮಸ್ಯೆಯಿಂದ ವಿಳಂಬವಾಗುತ್ತಿದೆ ಎಂದು ಸಿಬ್ಬಂದಿಗಳು ಹೇಳುತ್ತಿದ್ದಾರೆ.
ಲಸಿಕೆ ನೀಡುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ನ.ಪಂ.ಅಧ್ಯಕ್ಷ ವಿನಯಕುಮಾರ್ ಕಂದಡ್ಕ ರನ್ನು ಸಂಪರ್ಕಿಸಿದಾಗ “ಸರ್ವರ್ ಸ್ಲೋ ಇದ್ದು ಒಂದು ದಿನದಲ್ಲಿ ಗರಿಷ್ಟ 150-200 ಜನಕ್ಕೆ ಮಾತ್ರ ಲಸಿಕೆ ನೀಡಲು ಸಾಧ್ಯವಿರುವುದು. ಕಳೆದ ಕೆಲ ದಿನಗಳಿಂದ ತನಕ ಪ್ರತಿ 2ವಾರ್ಡ್ ಗಳಿಗೆ ಒಂದು ಕಡೆ ಲಸಿಕಾ ಶಿಬಿರ ಏರ್ಪಡಿಸಿ ಪ್ರಚಾರ ನೀಡಿದರೂ ಜನ ಸ್ವಲ್ಪ ಅಪನಂಬಿಕೆಯಿಂದ ಬಂದಿರಲಿಲ್ಲ. ಈಗ ಏಕಾಏಕಿ ಬೆಳಿಗ್ಗೆ 8.30 ರಿಂದಲೇ ಬಂದಿದ್ದುದರಿಂದ 100-130 ಜನ ಕಾಯುವಂತಾಗಿದೆ. ಆದರೂ ಅವರಿಗೆಲ್ಲ ಟೋಕನ್ ನಂಬರ್ ಕೊಡಲಾಗಿದೆ. 2ನೇ ಡೋಸ್ ತೆಗೆದುಕೊಳ್ಳುವವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸ್ಪೀಡ್ ಇಂಟರ್ನೆಟ್ ಗಾಗಿ ಕೇಬಲ್ ಇಂಟರ್ನೆಟ್ ವ್ಯವಸ್ಥೆ ಮಾಡಿದ್ದೇವೆ. ನಾಳೆಯಿಂದ ಹಿರಿಯ ನಾಗರಿಕರಿಗೆ ಪ್ರತ್ಯೇಕ ಕೌಂಟರ್ ಮಾಡುವ ಯೋಚನೆ ಇದೆ. ಅಗತ್ಯ ಬಿದ್ದರೆ ಕಾಯುವವರಿಗೆ ಉಪಹಾರದ ವ್ಯವಸ್ಥೆಯನ್ನು ಕೂಡಾ ಮಾಡುವ ಯೋಚನೆ ಇದೆ.
ದೇಶದಾದ್ಯಂತ ಈ ಪೋರ್ಟಲ್ 10 ಗಂಟೆಗೆ ಒಪನ್ ಆಗುತ್ತಿದ್ದು 9 ಗಂಟೆಗೆ ಒಪನ್ ಆದರೆ ಇನ್ನಷ್ಟು ಅನುಕೂಲ ಆಗಬಹುದು” ಎಂದಿದ್ದಾರೆ.