ಕೊರೊನಾ ಮಹಾಮಾರಿಯ ಎರಡನೇ ಅಲೆಯು ಲಗ್ಗೆ ಇಟ್ಟಿದ್ದು ಇದು ಮೊದಲನೆಯ ಅಲೆಗಿಂತ ಹೆಚ್ಚು ಭೀಕರವಾಗಿದ್ದು ಈ ಸಂದರ್ಭದಲ್ಲಿ ಕೊಲ್ಲಮೊಗ್ರ ಹಾಗೂ ಸಮೀಪದ ಗ್ರಾಮಗಳದಲ್ಲಿ ಕೊರೋನಾ ಖಾಯಿಲೆಗೆ ಸಂಬಂಧಿಸಿದ ರೋಗಿಗಳಿಗೆ ಯಾವುದೇ ಸಮಯದಲ್ಲಿ ತುರ್ತು ಸಹಾಯಕ್ಕಾಗಿ ಅಥವಾ ಇನ್ನಿತರ ಸೇವೆಗಳಿಗಾಗಿ ಯುವಕರ ತಂಡ ದಿನದ 24 ಗಂಟೆಯೂ ಕೊರೋನಾ ಖಾಯಿಲೆಗೆ ಸಂಬಂಧಿಸಿದ ರೋಗಿಗಳ ಸೇವೆಯಲ್ಲಿ ಇರಲಿದೆ. ಹಾಗೂ ಕೋವಿಡ್-19 ನಿಂದ ರೋಗಿ ಮೃತಪಟ್ಟರೂ ಕೂಡ ರೋಗಿಯ ಅಂತ್ಯಸಂಸ್ಕಾರವನ್ನು ಸುಳ್ಯ ತಾಲೂಕಿನಾದ್ಯಂತ ನೆರವೇರಿಸಲು ತಂಡ ಸಜ್ಜಾಗಿದೆ ಎಂದು ಈ ತಂಡದ ಉದಯ ಶಿವಾಲ ಇವರು ತಿಳಿಸಿದ್ದಾರೆ.
ಕಳೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲಿ ಉದಯ ಶಿವಾಲ ಹಾಗೂ ತಂಡ ಸುಳ್ಯ ಹಾಗೂ ಪುತ್ತೂರು ತಾಲೂಕುಗಳಲ್ಲಿ ಸುಮಾರು 5 ಲಕ್ಷ ಮೊತ್ತದ ಔಷಧಿಯನ್ನು ಮನೆ-ಮನೆಗೆ ವಿತರಿಸುವಲ್ಲಿ ಯಶಸ್ವಿಯಾಗಿದ್ದರು.
ಕೊರೋನಾ ಖಾಯಿಲೆಗೆ ಸಂಬಂಧಿಸಿದ ರೋಗಿಗಳ ತುರ್ತು ಸಹಾಯಕ್ಕಾಗಿ ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆಗಳು ಈ ಕೆಳಗಿನಂತಿವೆ.
9483904542
8431200521
9483244090
9480530646
9449936025
9353839088
9449366163
8088319522
9480253711
7676890393
8762783548
8431462737
✍ವರದಿ :- ಉಲ್ಲಾಸ್ ಕಜ್ಜೋಡಿ