ರಾಜ್ಯ ಮತ್ತು ಕೇಂದ್ರ ಸರಕಾರ ಬಡವರ ಪಾಲಿಗೆ ಕೋಮದಲ್ಲಿ ಇರುವ ಸರಕಾರವಾಗಿದೆ. ಕೋರೊಣ ವಿರುದ್ಧ ನಮಗಾಗಿ ದಾದಿಯರು, ವೈದ್ಯರು ಪೋಲಿಸ್, ವಿದ್ಯುತ್ ಕಂಪೆನಿ, ಮಾಧ್ಯಮ ಇವರೆಲ್ಲ ಹಗಲಿರುಳು ಶ್ರಮಿಸುವ ಸಂದರ್ಭದಲ್ಲಿ ನಾಡಿನ ಜನರಿಗೆ ಅನ್ನಭಾಗ್ಯದ ಮುಖಾಂತರ ನೀಡುತ್ತಿದ್ದ ಅಕ್ಕಿ ಕಡಿತಗೊಳಿಸುವ ಹೇಳಿಕೆ ನೀಡಿದ ಆಹಾರ ಸಚಿವರು ಸಾಯುವುದಿದ್ದರೇ ಸಾಯಲಿ ಅನ್ನುವ ಬೇಜಾವಬ್ದಾರಿ ಹೇಳಿಕೆ ನೀಡಿ ಜನರನ್ನು ಮಾನಸಿಕವಾಗಿ ಕುಗ್ಗಿಸುವ ಕೆಲಸ ಮಾಡುತ್ತಿದೆ. ಇಂದು ಒಂದು ಹೊತ್ತಿನ ಊಟಕ್ಕಾಗಿ ಕೈ ಚಾಚುವ ಪರಿಸ್ಧಿತಿ ಬಡವರಿಗೆ ಬಂದಿದೆ. ಮಾನ್ಯ ಮುಖ್ಯಮಂತ್ರಿಗಳೇ ನಿಮ್ಮ ಸಂಪುಟದ ಸಚಿವರು ಮಾತಾನಾಡುವ ಭರದಲ್ಲಿ ಬಡಜನರ ಹೊಟ್ಟೆಮೇಲೆ ಹೊಡೆಯುವ ಕೆಲಸ ಮಾಡದೇ ಬಡವರ ಮತ್ತು ನಾಡಿನ ಜನತೆ ಪರವಾಗಿ ನಿಲ್ಲಲು ಸೂಚಿಸಿ. ರಾಜ್ಯ ಸರ್ಕಾರದ ಎಲ್ಲಾ ಕಾನೂನನ್ನು ರಾಜ್ಯದ ಜನತೆ ಚಾಚು ತಪ್ಪದೇ ಪಾಲಿಸುತ್ತಾ ಇರುವ ಸಂದರ್ಭದಲ್ಲಿ ಇಂತಹ ಲಜ್ಜೆಗೆಟ್ಟ ಹೇಳಿಕೆ ಸಮಂಜಸವಲ್ಲ ಈ ಕೂಡಲೇ ಆಹಾರ ಸಚಿವರು ನಾಡಿನ ಜನತೆಯ ಕ್ಷಮೆ ಯಾಚಿಸಬೇಕು. ಜನರ ಜೀವ ಉಳಿಸಲು ನಮ್ಮ ಜೀವ ಉಳಿಸುವವರ ಜೀವ ಉಳಿಸಲು ಮನೆಯಿಂದ ಹೊರ ಬಾರದೇ ಮನೆಯಲ್ಲಿ ಇದ್ದು ಕೊರೋನ ವಿರುದ್ದ ಹೋರಾಡೋಣ.
ಮಿಥುನ್ ಕರ್ಲಪ್ಪಾಡಿ