Ad Widget

ಕೊರೊನಾ ಕಾರುಬಾರು….

ಜಗತ್ತು ಎಷ್ಟು ವಿಶಾಲವಾಗಿದೆ. ಹೇಗೆ ಬೇಕಾದರೂ ಬದುಕಬಹುದು ಅಂತ ಅಂದುಕೊಳ್ಳುತ್ತೇವೆ. ನಾನೇನು ಮಾಡಿದ್ರೂ ನಡೆಯುತ್ತೆ ಅಂತಾನೂ ಯೋಚಿಸ್ತೇವೆ. ಅದಕ್ಕಾಗಿ ನಾವು ಏನು ಮಾಡಲೂ ಸಿದ್ಧ. ಆದ್ರೆ ಒಮ್ಮೊಮ್ಮೆ ನಾವಂದುಕೊಂಡಂತೆ ಏನೂ ಆಗೋದಿಲ್ಲ. ಭ್ರಮೆ ಅತಿಯಾಗಿಯೋ, ವಾಸ್ತವದ ಅರಿವು ಕಡಿಮೆಯಾಗಿಯೋ ಪರಿಸ್ಥಿತಿಯನ್ನೇ ಅವಲೋಕಿಸದ ಮುಟ್ಠಾಳರಾಗುತ್ತೇವೆ. ಈಗ ಆಗಿರೋದು ಅದೇ ನೋಡಿ.

. . . . . . .

ಹಿಂದಿನ ವರ್ಷ ನಮ್ಮೆಲ್ಲರನ್ನು ಬೆಚ್ಚಿ ಬೀಳಿಸಿದ ಕೊರೋನಾ ಸ್ವಲ್ಪ ದೂರವಾಗಿ ಮನಸ್ಸು ಪ್ರಶಾಂತವಾಗಿತ್ತು. ಮದುವೆ ಸಮಾರಂಭಗಳು ಜನರ ಲೆಕ್ಕವಿಲ್ಲದೆಯೇ ಅದ್ಧೂರಿಯಾಗಿ ಸಾಗಿತ್ತು. ರಾಜಕೀಯ, ಚುನಾವಣೆ ಕೆಲಸಗಳೂ ಭರದಿಂದ ಸಾಗಿತ್ತು. ವಿದ್ಯಾರ್ಥಿಗಳು ಮತ್ತೆ ಶಾಲಾ ಕಾಲೇಜಿನತ್ತ ಮುಖ ಮಾಡಿದ್ದರು. ಎಲ್ಲವು ಸಮಸ್ಥಿತಿಯಲ್ಲಿರಲು ಮತ್ತೆ ಬೀಸಿತು ನೋಡಿ ಕೊರೋನಾ ಎರಡನೇ ಅಲೆಯೆಂಬ ಬಿರುಗಾಳಿ….

ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಾಗುತ್ತಿದ್ದರೆ ಇನ್ನೂ ಕೆಲವರು ತಮ್ಮ ತಮ್ಮ ಮದುವೆ ಮುಂಜಿ ಮುಂತಾದ ಸಮಾರಂಭಗಳ ಬ್ಯುಸಿಯಲ್ಲಿದ್ದರು. ಅದರ ನಡುವಿನಲ್ಲಿ ಸರ್ಕಾರಿ ಬಸ್ ನೌಕರರ ಪ್ರತಿಭಟನೆ ಕಾಲೇಜು ಮಕ್ಕಳಿಗಂತೂ ಸ್ವಲ್ಪ ಖುಷಿ ಕೊಟ್ಟಿತ್ತು. ಕಾರಣ ಎಕ್ಸಾಂ ಮುಂದುಡಿಕೆ ಆಗಿತ್ತು. ಆದರೆ ಇದೀಗ ಮತ್ತೆ ರಾಜ್ಯ ಸರ್ಕಾರ ಲಾಕ್ಡೌನ್ ಘೋಷಿಸಿರುವುದು ಅತ್ಯಂತ ನಿರಾಶದಾಯಕವಾಗಿದೆ. ಪ್ರಪಂಚ ಈಗ ನಾವಂದುಕೊಂಡಂತ್ತಿಲ್ಲ. ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ. ದುಡ್ಡೇ ಬೇಕು ಅನ್ನುತ್ತಿದ್ದವ ಉಸಿರಾಡಲು ಆಕ್ಸಿಜನ್ ಕೊಡಿ ಸಾಕು ಅನ್ನುವ ಮಟ್ಟಿಗೆ ಬಂದು ನಿಂತಿದ್ದಾನೆ. ಕೋಟ್ಯಾಧಿಪತಿ ಅನ್ನಿಸಿಕೊಂಡವನು ಕೊರೋನಾದಿಂದ ಒಂದು ಸರಳ ರೀತಿಯಲ್ಲಿ ಅಂತ್ಯಕ್ರಿಯೆ ಮಾಡಿಸಿಕೊಳ್ಳದೆಯೇ ಮೃತಪಡುತ್ತಿದ್ದಾನೆ. ಅಲ್ಲಾ ಏನಿದು ಬದುಕು…..ಏನಿದು ದೇಶಕ್ಕೆ ಸಂಕಟಗಳ ಕರಿಛಾಯೆ…

ದುಡ್ಡಿಗಾಗಿ ಮತ್ತೆ ಕೊರೋನಾ ಬಂತಾ?? ಅಥವಾ ನಿಜವಾಗಿಯೂ ಕೊರೋನಾ ಬಂದು ಮನುಷ್ಯ ಸಾಯುತ್ತಿದ್ದಾನಾ…..? ೭೦ವರ್ಷದ ರಾಜಕಾರಣಿಗಳಿಗೆ ಒಂದು ವಾರದಲ್ಲಿ ನಿವಾರಣೆಯಾಗುವ ರೋಗ, ೩೦ವರ್ಷದ ಯುವಕನನ್ನು ಅದೇಕೆ ಬಲಿತೆಗೆದುಕೊಳ್ಳುತ್ತಿದೆ? ಈ ಕೊರೋನಾ ಅಲೆ ಭೀಕರವಾಗಿದ್ದರೂ ಇದೂ ಭಿಕ್ಷುಕನನ್ನು ಮಾತ್ರ ಏಕೆ ಕಾಡುತ್ತಿಲ್ಲ…? ಇಂತಹ ಸಾವಿರಾರು ಗೊಂದಲಮಯ ಪ್ರಶ್ನೆಗಳಿಗೆ ಕೊರೋನಾ ಕಾರುಬಾರು ಅದೇನನ್ನು ಉತ್ತರಿಸುತ್ತದೆ ಅಲ್ಲವೇ…..?

✍️ಅರ್ಪಿತಾ ಕುಂದರ್
ವಿವೇಕಾನಂದ ಕಾಲೇಜು
ಪುತ್ತೂರು

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!