ನೀನು ಯಾರು ಎಂದು ಯಾರಿಗೂ ತೋರಿಸಿಕೊಡಬೇಡ…
ನಿನ್ನ ಜೀವನ ನಿನ್ನಯ ಆಯ್ಕೆ ಎಂದೂ ಮರಿಬೇಡ…
ಕಷ್ಟಗಳು ಸಾವಿರ ಬರುವುದು ಎಂದೂ ಭಯ ಬೇಡ…
ನೀನು ಯಾರು ಎಂದು ಯಾರಿಗೂ ತೋರಿಸಿ ಕೊಡಬೇಡ…
ಸ್ವಾರ್ಥದಿಂದ ಓಡುವ ಪ್ರಪಂಚ
ಯಾರಿಗೂ ನಿಲ್ಲಲ್ಲ…
ಪ್ರಯತ್ನವೆಂಬ ಮಂತ್ರವನ್ನು ಎಂದೂ ಮರಿಬೇಡ…
ಜೀವನದಲ್ಲಿ ಪ್ರೀತಿ, ಸ್ನೇಹವ ಎಂದೂ ಬಿಡಬೇಡ…
ನೀನು ಯಾರು ಎಂದು ಯಾರಿಗೂ ತೋರಿಸಿ ಕೊಡಬೇಡ…
ನಿನಗೆ ಸಿಗುವ ಅವಕಾಶಗಳನು ಎಂದೂ ಬಿಡಬೇಡ…
ಸಿಗದೇ ವಸ್ತುಗಳಿಗೆ ಆಸೆಪಡಬೇಡ…
ಸಾಯೋವರೆಗೂ ಸಾಧನೆಯ ನೀ ಬಿಡಬೇಡ…
ನೀನು ಯಾರು ಎಂದು ಯಾರಿಗೂ ತೋರಿಸಿ ಕೊಡಬೇಡ…
ಚಲಿಸುವ ಕಾಲವು ಕಲಿಸುವ ಪಾಠವ ಎಂದೂ ಮರಿಬೇಡ…
ಹರಿಯುವ ನದಿಯು ಉರಿಯುವ ಸೂರ್ಯನು ನಿನಗೆ ಮಾದರಿ…
ಕರ್ತವ್ಯದಲ್ಲಿ ನಿಷ್ಠೆಯನ್ನು ಎಂದೂ ಬಿಡಬೇಡ…
ಬದುಕಿನ ನಿಯಮದ ವಿರುದ್ಧವಾಗಿ ಎಂದೂ ನಡಿಬೇಡ…
ನಿನಗೆ ಹಿತವನು ಬಯಸುವವರ ಎಂದೂ ಮರಿಬೇಡ…
ಇಲ್ಲಿ ಯಾರು ಯಾರಿಗೆ ಎಂದು ಯಾರಿಗೂ ತಿಳಿದಿಲ್ಲ…
ತಿಳಿದರೂ ತಿಳಿಯದ ಹಾಗೆ ಇರದೇ ಬೇರೆ ವಿಧಿಯಿಲ್ಲ…
ನೀನು ಯಾರು ಎಂದು ಯಾರಿಗೂ ತೋರಿಸಿ ಕೊಡಬೇಡ…
ನಿನ್ನ ತನವ ನೀನು ಎಲ್ಲಿಯೂ ಬಿಟ್ಟು ಕೊಡಬೇಡ…
✍ಉಲ್ಲಾಸ್ ಕಜ್ಜೋಡಿ