Ad Widget

ಕೊರೊನಾ ನಿಯಂತ್ರಣಕ್ಕಾಗಿ ಕಾರ್ಯಕ್ರಮಗಳ ಬಗ್ಗೆ ನಿಗಾವಹಿಸಲು ಫ್ಲೈಯಿಂಗ್ ಸ್ಕ್ವಾಡ್ ರಚನೆ

ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತವು ಸಾರ್ವಜನಿಕ ಹಿತದೃಷ್ಟಿಯಿಂದ ಎಲ್ಲಾ ಅವಶ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ರಾಜ್ಯಾದಂತ ಸಾರ್ವಜನಿಕ ಸಮಾರಂಭ, ಆಚರಣೆಗಳು, ಮನರಂಜನೆ ಕಾರ್ಯಕ್ರಮಗಳಿಗೆ ಜನರ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ದೃಷ್ಟಿಯಿಂದ ಫ್ಲೈಯಿಂಗ್ ಸ್ಕ್ವಾಡ್ ರಚಿಸಿ ಆದೇಶಿಸಿದೆ.

. . . . . . . . .

ಸುಳ್ಯ ನಗರ ಪಂಚಾಯತ್ ಹಾಗೂ ಉಬರಡ್ಕಮಿತ್ತೂರು ಭಾಗದ ಫ್ಲೈಯಿಂಗ್ ಸ್ಕ್ವಾಡ್ ಆಗಿ ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ, ಜಾಲ್ಸೂರು ಹಾಗೂ ಕನಕಮಜಲು ಗ್ರಾಮಕ್ಕೆ ಸುಳ್ಯ ಎ.ಪಿ.ಎಂ.ಸಿ. ಕಾರ್ಯದರ್ಶಿ ನಿರಂಜನ್ ಸಿ. ಹಿರೇಮಠ, ಸಂಪಾಜೆ ಹಾಗೂ ಅರಂತೋಡು ಗ್ರಾಮಕ್ಕೆ ಸುಳ್ಯ ಕ್ಷೇತ್ರಶಿಕ್ಷಣಾಧಿಕಾರಿ ಮಹಾದೇವ, ಬೆಳ್ಳಾರೆ ಹಾಗೂ ಪೆರುವಾಜೆ ಗ್ರಾಮಕ್ಕೆ ಸುಳ್ಯ ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಹರೀಶ್, ಕಳಂಜ ಹಾಗೂ ದೇವಚಳ್ಳ ಗ್ರಾಮಕ್ಕೆ ಸುಳ್ಯ ಬಿ.ಸಿ.ಎಂ ಇಲಾಖೆ ವಿಸ್ತರಣಾಧಿಕಾರಿ ಗಣೇಶ್ ನಾಯಕ್, ಆಲೆಟ್ಟಿ ಹಾಗೂ ಐವರ್ನಾಡು ಗ್ರಾಮಕ್ಕೆ ಸುಳ್ಯ ವಲಯಾರಣ್ಯಾಧಿಕಾರಿ ಗಿರೀಶ್, ನೆಲ್ಲೂರುಕೆಮ್ರಾಜೆ ಗ್ರಾಮಕ್ಕೆ ತೋಟಗಾರಿಕಾ ಇಲಾಖೆ ನಿರ್ದೇಶಕಿ ಶ್ರೀಮತಿ ಸುಹಾನ, ಹರಿಹರಪಲ್ಲತ್ತಡ್ಕ, ಕೊಲ್ಲಮೊಗ್ರ ಹಾಗೂ ಗುತ್ತಿಗಾರು ಗ್ರಾಮಕ್ಕೆ ಸುಳ್ಯ ಅಬಕಾರಿ ಇನ್ಸ್‌ಪೆಕ್ಟರ್ ಸಿದ್ಧಪ್ಪ ಮೇಟಿ, ಕೊಡಿಯಾಲ, ಬಾಳಿಲ ಹಾಗೂ ಮುಪ್ಪೇರಿಯಾ ಗ್ರಾಮಕ್ಕೆ ಮಹಿಳಾ ಮತ್ತು ಶಿಶು ಅಭಿವೃದ್ಧಿ ಅಧಿಕಾರಿ ಶ್ರೀಮತಿ ರಶ್ಮಿ, ಪಂಜ ಹಾಗೂ ಕಲ್ಮಡ್ಕ ಗ್ರಾಮಕ್ಕೆ ಪಂಜ ವಲಯಾರಣ್ಯಾಧಿಕಾರಿ ಮಂಜುನಾಥ್, ಅಮರಮುಡ್ನೂರು, ಮಂಡೆಕೋಲು ಹಾಗೂ ಅಜ್ಜಾವರ ಗ್ರಾಮಕ್ಕೆ ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಣ್ಣೇಗೌಡ ಎಸ್., ಮತ್ತು ಮರ್ಕಂಜ ಹಾಗೂ ಮಡಪ್ಪಾಡಿ ಗ್ರಾಮಕ್ಕೆ ಯುವಜನ ಮತ್ತು ಕ್ರೀಡಾಧಿಕಾರಿ ವೆಂಕಟ್ರಮಣ ರವರನ್ನು ಸುಳ್ಯ ತಹಶೀಲ್ದಾರ್ ಕು.ಅನಿತಾಲಕ್ಷ್ಮೀಯವರು ನೇಮಕಗೊಳಿಸಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading