ಕಳೆದ ಹದಿನೈದು ದಿನಗಳಿಂದ ಕೋಟೆಮುಂಡುಗಾರಿನಲ್ಲಿರುವ ಬಿ ಎಸ್ ಎನ್ ಎಲ್ ಟವರ್ ಸ್ತಬ್ದವಾಗಿದೆ.ಕಳಂಜ ಮತ್ತು ಬಾಳಿಲ ಗ್ರಾಮದ ಬಹುಭಾಗದ ಗ್ರಾಹಕರು ಇದನ್ನು ಅವಲಂಬಿಸಿರುತ್ತಾರೆ. ಸಂಬಂಧಪಟ್ಟವರ ಗಮನಕ್ಕೆ ತಂದರೂ ಇನ್ನು ಕೂಡಾ ಸ್ಪಂದನ ಕಾಣುವುದಿಲ್ಲ. ಕಳಂಜದ “ನಮ್ಮೆಲ್ಲರ ಬಳಕೆದಾರರ ವೇದಿಕೆ”ಯವರು ನಿರಂತರ ಬಿಎಸ್ ಎನ್ ಎಲ್ ಅಧಿಕಾರಿಗಳನ್ನು ನೆನಪಿಸುವ ಕೆಲಸ ಮಾಡಿರುತ್ತಾರೆ. ಎಸ್ ಡಿ ಇ ರವರ ಗಮನಕ್ಕೆ ತಂದಾಗ ಟವರ್ ನಿರ್ವಹಣೆ ವಿಭಾಗ ಬೇರೆ ಇದೆ ಅವರಿಗೆ ಹೇಳಿ ಎಂಬ ಮಾತನ್ನು ಹೇಳುತ್ತಾರೆ. ಅವರನ್ನು ಸಂಪರ್ಕಿಸಿದಾಗ ಹಾರಿಕೆಯ ಉತ್ತರ ನೀಡಿ ಜಾರುವ ಪ್ರಯತ್ನ ಮಾಡುತ್ತಾರೆ. ಇಲಾಖೆಗೆ ಉತ್ತರದಾಯಿತ್ವ ಇಲ್ಲವೇ? ಇಂದು ಮೊಬೈಲನ್ನು ಅವಲಂಬಿಸದ ವ್ಯಕ್ತಿ ಇರಲಾರರು. ತುರ್ತು ಸಂದರ್ಭಗಳಲ್ಲಿ ಗ್ರಾಮದ ಜನತೆ ಏನು ಮಾಡಬೇಕು?. ತುರ್ತಾಗಿ ಸರಿಪಡಿಸದಿದ್ದಲ್ಲಿ ಬಳಕೆದಾರರ ವೇದಿಕೆ ವತಿಯಿಂದ ಬಿ ಎಸ್ ಎನ್ ಎಲ್ ಆಫೀಸ್ ಮುಂದೆ ಗ್ರಾಹಕರು ಪ್ರತಿಭಟನೆಗೆ ಯೋಚಿಸುತ್ತಿದ್ದಾರೆ. ಯಾವುದಕ್ಕೂ ಕೋರೋನಾ ನಿರ್ಬಂಧದಿಂದ ಪ್ರತಿಭಟನೆ ಸ್ವಲ್ಪ ಸಮಯ ತೆಗೆಯುವ ಸಾಧ್ಯತೆ ಕಂಡುಬರುತ್ತಿದೆ. ಹೆಚ್ಚು ಒತ್ತಡಕ್ಕೆ ಕಾಯದೇ ಸಂಬಂಧ ಪಟ್ಟವರು ತಕ್ಷಣ ಸ್ಪಂದಿಸಿ ಸರಿಪಡಿಸುವಂತೆ ಬಳಕೆದಾರರು ಅಗ್ರಹಿಸುತ್ತಿದ್ದಾರೆ.
- Thursday
- November 21st, 2024