ಕೊರೋನ ಒಂದು ಭೀಕರ ಸಾಂಕ್ರಾಮಿಕ ಕಾಯಿಲೆ. ಇದು ನಮ್ಮ ದೇಶವನ್ನು ಬೆಚ್ಚಿ ಬೀಳಿಸಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹಾಗೆಯೇ ಮರಣದ ಸಂಖ್ಯೆಯೂ ಏರುತ್ತಲೇ ಹೋಗುತ್ತಿದೆ.
ಸರ್ಕಾರ ಅದೇಷ್ಟೋ ಮಂಜಾಗ್ರತಾ ಕ್ರಮ ಕೈಗೊಂಡರೂ ಜನರು ಅದನ್ನು ಪಾಲನೆ ಮಾಡುವಲ್ಲಿ ಎಡವುತ್ತಿದ್ದಾರೆ.
ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡುವಿಕೆ.. ಮುಂತಾದವನ್ನು ಜನ ಮಾಡುತ್ತಿಲ್ಲ, ಇತ್ತ ಒಬ್ಬರ ನಿರ್ಲಕ್ಷ್ಯ ದಿಂದಾಗಿ ಮನೆಮಂದಿ, ಅಕ್ಕ ಪಕ್ಕದವರು ತೊಂದರೆ ಅನುಭವಿಸಬೇಕಾಗಿದೆ. ಭಾರತ ದೇಶದ ಪ್ರತಿಯೊಬ್ಬ ಪ್ರಜೆಯೂ ಸರಕಾರದ ಜೊತೆ ಕೈ ಜೋಡಿಸಿದರೆ ಭಯಪಡಬೇಕಾಗಿಲ್ಲ. ಸರ್ಕಾರ ಯಾವುದಕ್ಕೂ ಕೊರತೆ ಆಗದ ರೀತಿಯಲ್ಲಿ ನಿಭಾಯಿಸಿಕೊಂಡು ಹೋಗುತ್ತದೆ. ನಮ್ಮ ಜೀವ ನಮ್ಮ ಕೈಯಲ್ಲಿರುವಾಗ ಅದನ್ನು ಕಾಪಾಡಿಕೊಳ್ಳಬೇಕಾಗಿರುವುದು ನಾವೇ ಅಲ್ವ. ಕೊರೊನ ಎರಡನೇ ಅಲೆ ನಮ್ಮನ್ನು ಜೀವನವನ್ನು ಅಲ್ಲೋಲ ಕಲ್ಲೋಲ ಗೊಳಿಸುವ ಮೊದಲು ಎಚ್ಚೆತ್ತುಕೊಳ್ಳಬೇಕಿದೆ.
ಸುಪ್ರೀತ್ ಮೋಂಟಡ್ಕ