ಏನೆಕಲ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿರುವ ಭರತ್ ನೆಕ್ರಾಜೆಯವರು ಏನೆಕಲ್ಲು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇವರನ್ನು ಸಹಕಾರಿ ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷ ಭವಾನಿ ಶಂಕರ ಪೂಂಬಾಡಿ, ನಿರ್ದೇಶಕ ವೆಂಕಟ್ರಮಣ ಕೆಮ್ರೋಳಿ, ಅಣ್ಣಾಜಿ ಗೌಡ ಕಟ್ಟ, ಕಿರಣ್ ಕುಮಾರ್ ಮಾದನಮನೆ, ಅನಿತಾ ರೇಗಪ್ಪ ಗೌಡ ಪುಂಡಿಗದ್ದೆ, ವೇದಾವತಿ ಕೋಟಿಗೌಡನ ಮನೆ, ಯಮುನಾ ಸಂಕಡ್ಕ, ಶ್ರೀನಿವಾಸ್ ಅಚಾರ್ಯ ಮತ್ತು ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರತನ್ ಕಲ್ಕುದಿ, ಸಿಬ್ಬಂದಿಗಳಾದ ಅನಿತಾ, ರೋಷನ್, ಗುರುಪ್ರಸಾದ್ ಯು, ಕಿಶೋರ್ ಕುಮಾರ್ ಕೆ, ಗುರುಪ್ರಸಾದ್ ಎಂ ಮುಂತಾದವರು ಉಪಸ್ಥಿತರಿದ್ದರು.
- Thursday
- November 21st, 2024