ಸುಳ್ಯದ ವಿಶ್ವ ಕಾಂಪ್ಲೆಕ್ಸ್ ನಲ್ಲಿರುವ ಟೆಕ್ಸ್ ಟೈಲ್ಸ್ & ರೆಡಿಮೇಡ್ ಡ್ರೆಸ್ ಮಳಿಗೆ ದೀಕ್ಷಾ ಟ್ರೇಡರ್ಸ್ ನ ನೂತನ ವಿಸ್ತ್ರತ ಮಳಿಗೆ ಎ.26 ರಂದು ಉದ್ಘಾಟನೆಗೊಳ್ಳಲಿದೆ.
ಕಳೆದ 27 ವರ್ಷಗಳಿಂದ ಜವುಳಿ ವ್ಯಾಪಾರದಲ್ಲಿ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿರುವ ದೀಕ್ಷಾ ಟ್ರೇಡರ್ಸ್ ಈಗ ಜನರ ಹೆಚ್ಚಿನ ಅನುಕೂಲತೆಗಾಗಿ, ಮಳಿಗೆಯನ್ನು ಮೇಲಂತಸ್ತಿನಲ್ಲಿ ವಿಶಾಲವಾಗಿ ವಿಸ್ತ್ರತಗೊಳಿಸಿದ್ದು, ಬಟ್ಟೆಗಳ ಅಪಾರ ಸಂಗ್ರಹವಿದ್ದು ಗ್ರಾಹಕರಿಗೆ ಖರೀದಿಸಲು ಅನುಕೂಲ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಮದುವೆ ಸೀರೆಗಳು, ರೇಷ್ಮೆ ಮತ್ತು ಇನ್ನಿತರ ಎಲ್ಲಾ ಸೀರೆಗಳು, ಸೂಟಿಂಗ್,ಶರ್ಟಿಂಗ್ ,ಸಾಂಪ್ರದಾಯಿಕ ಪೂಜಾ ವಸ್ತ್ರಗಳು, ಎಲ್ಲಾ ಉಡುಗೆ ತೊಡುಗೆಗಳು, ಕರ್ಟನ್ಸ್,ಮ್ಯಾಚಿಂಗ್ ಬೌಸ್, ಕಾಟನ್ ಬಟ್ಟೆ, ನೆಟ್ ಬಟ್ಟೆ, ಸಿದ್ಧ ಉಡುಪುಗಳು,ಗಾರ್ಡನ್ ಸೀರೆಗಳು ದೊರೆಯುತ್ತದೆ. ಅಲ್ಲದೆ ಪೀಟರ್ ಇಂಗ್ಲೆಂಡ್, ರೇಮಂಡ್ ಮುಂತಾದ ಪ್ರಸಿದ್ಧ ಕಂಪೆನಿಗಳ ಉಡುಪುಗಳ ಅಪೂರ್ವ ಸಂಗ್ರಹವಿದೆ ಎಂದು ಮಾಲಕ ಮಾಧವ ರಾವ್ ತಿಳಿಸಿದ್ದಾರೆ.
- Thursday
- November 21st, 2024