ಕೆ.ವಿ.ಜಿ. ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿನಿಯೊಬ್ಬಳು ಕಾಲೇಜಿನ ನೀತಿ ನಿಯಮ ಉಲ್ಲಂಘಿಸಿದ ಬಗ್ಗೆ ಧಾರ್ಮಿಕ ವಿಚಾರ ಮುಂದಿಟ್ಟು ಕ್ಯಾಂಪಸ್ ಫ್ರಂಟ್‌ನ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯನ್ನು ಅನಾಗರಿಕ ವರ್ತನೆ ಎಂದಿರುವ ಎಬಿವಿಪಿ ಖಂಡನೆ ವ್ಯಕ್ತಪಡಿಸಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಕಾಲೇಜು ಆವರಣದಲ್ಲಿ ಗೊಂದಲವನ್ನು ಸೃಷ್ಟಿಸಿದ ಕ್ಯಾಂಪಸ್ ಫ್ರಂಟ್‌ನ ನಾಯಕನೆಂದು ಹೇಳಿಕೊಳ್ಳುತ್ತಿರುವ ಅನ್ಸಾರ್ ಬೆಳ್ಳಾರೆ ಮತ್ತು ಇದಕ್ಕೆ ಬೆಂಬಲಿಸುತ್ತಿರುವ ಸಂಘಟನೆಗಳ ಅನಾಗರಿಕ ವರ್ತನೆ ತೋರಿದ್ದಾರೆ. ಕ್ಯಾಂಪಸ್ ಫ್ರಂಟ್‌ನ ಕಾರ್ಯಕರ್ತರೆಂದು ಹೇಳಿಕೊಳ್ಳುವ ವ್ಯಕ್ತಿಗಳು ಕಾಲೇಜಿನ ಆವರಣಕ್ಕೆ ಅಕ್ರಮ ಪ್ರವೇಶ ಮಾಡಿ ಕಾಲೇಜಿನ ಗೇಟಿಗೆ ಬೀಗ ಹಾಕಿ ಪರೀಕ್ಷಾ ಸಮಯದಲ್ಲಿ ದಾಂಧಲೆ ನಡೆಸಿ ಗೊಂದಲ ಹುಟ್ಟಿಸಿರುವುದು ಕಾನೂನು ಬಾಹಿರವಾಗಿರುತ್ತದೆ.
ಕಾಲೇಜಿಗೆ ಬರುವ ಎಲ್ಲಾ ವಿದ್ಯಾರ್ಥಿನಿಯರಿಗೆ ಸಮಾನ ರೀತಿಯ ನೀತಿ ನಿಯಮಗಳಿದ್ದು, ಅದನ್ನು ಉಲ್ಲಂಘಿಸುವ ಯಾವುದೇ ವಿದ್ಯಾರ್ಥಿನಿಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವರೇ ಆಡಳಿತ ಮಂಡಳಿಗೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ನಮ್ಮ ವಿದ್ಯಾರ್ಥಿ ಪರಿಷತ್ತು ಘಟಕ ಬೆಂಬಲಿಸುತ್ತದೆ.
ಈ ವಿಚಾರದ ಬಗ್ಗೆ ಕೆ.ವಿ.ಜಿ.ಕಾನೂನು ಕಾಲೇಜು ಆಡಳಿತ ಮಂಡಳಿ ಕಾಲೇಜಿನ ನಿಯಮವನ್ನು ಉಲ್ಲಂಘನೆ ಮಾಡಿ, ಕೋಮು ಭಾವನೆಯನ್ನು ಕೆರಳಿಸಲು ವರ್ತಿಸುವವರ ವಿರುದ್ಧ ಯಾವುದೇ ಪ್ರಭಾವ ಮತ್ತು ಬೆದರಿಕೆಗೆ ಬಗ್ಗದೆ ಕಠಿಣ ನಿಲುವನ್ನು ವ್ಯಕ್ತಪಡಿಸಬೇಕು. ಶಿಕ್ಷಣ ಸಂಸ್ಥೆಯ ಮತ್ತು ಶೈಕ್ಷಣಿಕ ನಿಯಮಗಳಿಗೆ ವಿದ್ಯಾರ್ಥಿಗಳ ಭಾವನೆಗಳಿಗೆ ಕುಂದು ಉಂಟಾದಾಗ ಅದರ ವಿರುದ್ಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಹೋರಾಟಕ್ಕೆ ಸದಾ ಸಿದ್ಧವಾಗಿರುತ್ತದೆ ಎಂದು ಕೆ.ವಿ.ಜಿ ಕಾನೂನು ಕಾಲೇಜು ಅ.ಭಾ.ವಿ.ಪ. ಘಟಕದ ಕಾರ್ಯದರ್ಶಿ ಕಾರ್ತಿಕ್ ಬದಿವನ ಹೇಳಿಕೆಯಲ್ಲಿ ತಿಳಿಸಿದ್ದಾರೆ.