ದೇವಚಳ್ಳ ಗ್ರಾಮದ ಚಳ್ಳದಲ್ಲಿ ಜೀರ್ಣೋದ್ಧಾರಗೊಳ್ಳದೇ ಅವನತಿ ಹೊಂದಿದ್ದ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕಾಲ ಕೂಡಿಬಂದಿದ್ದು ಏ.24 ರಂದು ಭಕ್ತಾಭಿಮಾನಿಗಳ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ. ದೇವಚಳ್ಳ, ನೆಲ್ಲೂರುಕೆಮ್ರಾಜೆ, ಅಮರ ಮುಡ್ನೂರು ಗ್ರಾಮದ ದೇವಸ್ಥಾನ ಹಾಗೂ ಮನೆಗಳಲ್ಲಿ ಪ್ರಶ್ನೆ ಚಿಂತನೆ ನಡೆದ ಸಂದರ್ಭದಲ್ಲಿ ದೇವಸ್ಥಾನ ಜೀರ್ಣೋದ್ಧಾರ ಆಗಬೇಕೆಂದು ಕಂಡುಬಂದಿತ್ತು. ಹಳ್ಳದಲ್ಲಿ ದೇವಸ್ಥಾನ ಇತ್ತೆಂಬ ಜಾಗದಲ್ಲಿ ಕೆರೆ ಹಾಗೂ ಬಾವಿಯ ಕುರುಹು ಕಂಡುಬರುತ್ತದೆ. ಏ. 20 ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯಲ್ಲಿ ನಡೆಯುವ ಸಭೆಗೆ ದೇವಸ್ಥಾನ ವ್ಯಾಪ್ತಿಗೊಳಪಟ್ಟ ಭಕ್ತಾಧಿಗಳು ಆಗಮಿಸಿ ಸಲಹೆ ಸೂಚನೆ ನೀಡಬೇಕೆಂದು ಸಂಚಾಲಕರಾದ ಚಂದ್ರಶೇಖರ ಭಟ್ ತಳೂರು ತಿಳಿಸಿದ್ದಾರೆ.
- Friday
- November 1st, 2024