ಪಂಜ ಪರಿಸರದಲ್ಲಿ ಧಾರಾಕಾರವಾಗಿ ಸುರಿದ ಮಳೆ ಮತ್ತು ಭಯಾನಕ ಗಾಳಿಗೆ ರಸ್ತೆ ಮತ್ತು ಮನೆಗಳಿಗೆ ಬಿದ್ದ ಮರಗಳನ್ನು ವಿಪತ್ತು ನಿರ್ವಹಣಾ ಘಟಕ ಪಂಜ ವಲಯದ ಸದಸ್ಯರು ತೆರವು ಗೊಳಿಸಿದರು. ಪಂಜ ಪಂಚಲಿಂಗೇಶ್ವರ ದೇವಾಲಯದ ಹಿಂಭಾಗದಲ್ಲಿ ಬಿದ್ದ ಮರಗಳನ್ನು ತೆರವು ಗೊಳಿಸಿ ನಂತರ ಡಬ್ಬಲ್ ಕಟ್ಟೆಯ ರಸ್ತೆಯುದ್ದಕ್ಕೂ ಬಿದ್ದ ಬೃಹದಾಕಾರದ ಮರಗಳು ಕಡಿದು ಪಂಜದ ಕೂತ್ಕುಂಜ ಗ್ರಾಮದ ದಾಮೋದರ ಕೃಷ್ಣ ನಗರ ಇವರ ಮನೆಗೆ ಮರ ಬಿದ್ದ ಮರ ತೆರವುಗೊಳಿಸಿದರು. ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ವಿಶ್ವನಾಥ ಸಂಪ ,ವಿನಯ್ ಕುಮಾರ್ ಕರಿಕ್ಕಳ ಶ್ರೀನಿವಾಸ ಭೀಮಗುಳಿ,ಹರ್ಷ ಕರಿಕ್ಕಳ, ಧರ್ಮಪಾಲ ಕಣ್ಕಲ್,ವಿಜಯ ಕಣ್ಕಲ್ ಹಾಗೂ ಜನಾರ್ದನ ನಾಗತೀರ್ಥ ಇವರ ಸಹಕಾರದಿಂದ ಮರಗಳನ್ನು ತೆರವು ಗೊಳಿಸಲಾಯಿತು .
- Friday
- November 1st, 2024