ಈಗಾಗಲೇ ದೇಶಾದ್ಯಂತ ಕೊರೊನ ವೈರಸ್ ನ 2ನೇ ಅಲೆ ಪ್ರಾರಂಭವಾಗಿದ್ದು ಜಿಲ್ಲೆಯಲ್ಲೂ ಕೂಡಾ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಈ ವೈರಾಣುವಿನ ವಿರುದ್ದ ಹೋರಾಡಲು ಈಗಾಗಲೇ ದೇಶಾದ್ಯಂತ ಕೋವಿಡ್ ಲಸಿಕೆಯನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದೆ. ಈಗಾಗಲೇ ಕಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮೊದಲ ಕೋವಿಡ್ ಲಸಿಕಾ ಶಿಬಿರವು ಗ್ರಾಮಸ್ಥರ ಸಹಕಾರದಿಂದ ಬಹಳ ಯಶಸ್ವಿಯಾಗಿ ನಡೆದಿರುತ್ತದೆ. ಮುಂದುವರೆದು ಹಿಂದಿನ ಲಸಿಕಾ ಶಿಬಿರದಲ್ಲಿ ಲಸಿಕೆಯನ್ನು ಪಡೆಯದೇ ಇರುವವರಿಗೆ ಇದೇ ಬರುವ ಎ. 15ನೇ ಗುರುವಾರ (ನಾಳೆ) ಬೆಳಿಗ್ಗೆ ಗಂಟೆ 10 ರಿಂದ ಅಪರಾಹ್ನ 3 ಗಂಟೆವರೆಗೆ ಅಯ್ಯನಕಟ್ಟೆಯ ಪಂಡಿತ್ ದೀನ್ ದಯಾಳ್ ಸಮುದಾಯ ಭವನದಲ್ಲಿ 45 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಕೋವಿಡ್ ಲಸಿಕಾ ಶಿಬಿರವು ನಡೆಯಲಿದೆ. ಸದ್ರಿ ಲಸಿಕೆ ಪಡೆಯಲು ಬರುವಾಗ ಕಡ್ಡಾಯವಾಗಿ ಆಧಾರ್ ಪ್ರತಿ, ಮತ್ತು ಮೊಬೈಲ್ ನ್ನು ತರುವಂತೆ ಸೂಚಿಸಲಾಗಿದೆ. ಲಸಿಕೆಯನ್ನು ಪಡೆದರೆ ಅಡ್ಡ ಪರಿಣಾಮಗಳಾಗುತ್ತವೆ ಎನ್ನುವ ವದಂತಿಗೆ ಕಿವಿಗೊಡದೆ ಕೊರೊನಾ ವೈರಸನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗೃತ ಕ್ರಮವಾಗಿ ಲಸಿಕೆಯನ್ನು ಹಾಕಿಸಿಕೊಂಡು ಕೊರೊನ ಮುಕ್ತ ಕಳಂಜವನ್ನಾಗಿ ಮಾಡಲು ಈ ಮೂಲಕ ವಿನಂತಿಸಿದೆ.
ದಿನಾಂಕ :07/04/2021ರಂದು ಕಳಂಜ ಗ್ರಾಮ ಪಂಚಾಯತ್ ನ ಸಭಾಭವನದಲ್ಲಿ ನಡೆದ ಲಸಿಕಾ ಶಿಬಿರದಲ್ಲಿ ಲಸಿಕೆ ಪಡೆದವರು ನಾಳೆಯ ಶಿಬಿರದಲ್ಲಿ ಲಸಿಕೆ ಪಡೆಯಬೇಕಾಗಿಲ್ಲ. ದಿನಾಂಕ:07.04.2021 ರಂದು ಲಸಿಕೆ ಪಡೆದವರಿಗೆ 2ನೇ ಹಂತದ ಲಸಿಕೆಯನ್ನು ಪಡೆದುಕೊಳ್ಳಲು ಶಿಬಿರವನ್ನು ಏರ್ಪಡಿಸಿ ತಿಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
- Thursday
- November 21st, 2024