ಸುಳ್ಯ ನಗರದ ಕೆರೆಮೂಲೆ ವಾರ್ಡಿನ ನಾರಾಯಣ (ಪೊಡಿಯ) ಹಾಗೂ ಸೀತಮ್ಮ ಅವರ ಮನೆಗೆ ತೆರಳುವ ದಾರಿ ಅಭಿವೃದ್ಧಿ ಕಾಣದೇ ಹಳ್ಳಹಿಡಿದಿದೆ. ಕತ್ತಲೆಯಲ್ಲಿದ್ದ ನಾರಾಯಣ ಅವರ ಮನೆಗೆ ಸೇವಾ ಭಾರತಿ ಹಾಗೂ ಸೆಲ್ಕೋ ಸೋಲಾರ್ ಸಂಸ್ಥೆಯ ವತಿಯಿಂದ ಬೆಳಕು ಕಾಣುವಂತಾಗಿದೆ. ಆದರೇ ಇವರ ಮನೆಯನ್ನು ಸಂಪರ್ಕಿಸುವ ರಸ್ತೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಬಡವರಾದರೇ ಎಷ್ಟು ನಿರ್ಲಕ್ಷ್ಯ ವಹಿಸುತ್ತಾರೆ ಈ ಜನಪ್ರತಿನಿಧಿಗಳು. ಚುನಾವಣಾ ಸಂದರ್ಭದಲ್ಲಿ ಭರವಸೆ ನೀಡಿ ಮತ ಪಡೆದ ಬಳಿಕ ಜನಪ್ರತಿನಿಧಿಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಈ ಬಡ ಕುಟುಂಬ. ಯಾರು ಒತ್ತಾಯ ಮಾಡುತ್ತಾರೆ, ಯಾರು ಶ್ರೀಮಂತರಾಗಿದ್ದಾರೆ ಅವರ ಮನೆವರೆಗೆ ಕಾಂಕ್ರೀಟ್ ಹಾಕುವ ಪರಿಸ್ಥಿತಿ ಇಲ್ಲಿ ಕಂಡುಬರುತ್ತಿದೆ. ಇನ್ನಾದರೂ ಸರಕಾರದ ಅನುದಾನಗಳನ್ನು ಅನಗತ್ಯ ಪೋಲು ಮಾಡದೇ ಇಂತಹ ಕಡೆಗಳಲ್ಲಿ ಅಭಿವೃದ್ಧಿ ಮಾಡುವಂತಾಗಲಿ.
ರಸ್ತೆ ಅಭಿವೃದ್ಧಿ ಮಾಡುತ್ತೇವೆ : ವಿನಯಕುಮಾರ್ ಕಂದಡ್ಕ
ಇಲ್ಲಿ ರಸ್ತೆ ನಿರ್ಮಾಣವಾಗುವಲ್ಲಿ ಜಾಗದ ತೊಂದರೆ ಇದೆ, ತಡೆಗೋಡೆ ನಿರ್ಮಿಸಿ ರಸ್ತೆ ಮಾಡಬೇಕಾಗಿದ್ದು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಮಾಡುತ್ತೇವೆ ಎಂದು ನ.ಪಂ.ಅಧ್ಯಕ್ಷ ವಿನಯಕುಮಾರ್ ಕಂದಡ್ಕ ತಿಳಿಸಿದ್ದಾರೆ.