ಸುಳ್ಯ ನಗರ ಮಧ್ಯಭಾಗದಲ್ಲಿರುವ ಕೆರೆಮೂಲೆಯಲ್ಲಿ ಹಲವಾರು ವರ್ಷಗಳಿಂದ ಕತ್ತಲಲ್ಲಿದ್ದ ಮನೆಗೆ ಯುಗಾದಿ ದಿನದಂದು ಬೆಳಕು ಕಂಡಿದೆ.
ಸೇವಾ ಭಾರತಿ ಸುಳ್ಯ ವತಿಯಿಂದ ಸೆಲ್ಕೋ ಸೋಲಾರ್ ಸಹಯೋಗದೊಂದಿಗೆ ವಿದ್ಯುತ್ ಸಂಪರ್ಕವಿಲ್ಲದೇ ಸಂಕಷ್ಟದಲ್ಲಿದ್ದ ಕೆರೆಮೂಲೆ ವಾರ್ಡಿನ ನಾರಾಯಣ (ಪೊಡಿಯ) ಎಂಬ ಬಡ ಕುಟುಂಬಕ್ಕೆ ಸೋಲಾರ್ ದೀಪ ಅಳವಡಿಸಲಾಯಿತು. ಇವರಿಗೆ ಒಬ್ಬಳು ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಸೇರಿದಂತೆ ಮೂವರು ಹೆಣ್ಣು ಮಕ್ಕಳಿದ್ದು ಬೆಳಕಿನ ವ್ಯವಸ್ಥೆ ಇಲ್ಲದೇ ರಾತ್ರಿ ಓದಲು ಬರೆಯಲು ಕಷ್ಟಪಡುವಂತಾಗಿತ್ತು. ಇಷ್ಟು ದಿನ ಕಳೆದ ಮೇಲಾದರೂ ಇವರ ಬಾಳಲ್ಲಿ ಬೆಳಕು ಕಾಣುವಂತಾಗಿದ್ದು ಭಾಗ್ಯವೇ ಸರಿ. ಜತೆಗೆ ಈ ಬಾರಿಯ ಯುಗಾದಿ ಪ್ರಯುಕ್ತ ಪಡಿತರ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ಸಂಘದ ಹಿರಿಯರಾದ ಶ್ರೀನಿವಾಸ ಕೆದಿಲ, ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಬ್ಯಾಂಕಿನ ಅಧ್ಯಕ್ಷ ಹರೀಶ್ ಬೂಡುಪನ್ನೆ ಮ್ಯಾನೇಜರ್ ಸುದರ್ಶನ್ ಸೂರ್ತಿಲ, ಪಿ ಕೆ ಉಮೇಶ್ ,ಆನಂದರಾವ್ ಕಾಂತಮಂಗಲ , ಶೀನಪ್ಪ ಬಯಂಬು, ಲೋಕೇಶ್ ಕೆರೆಮೂಲೆ, ಮೋಹನ್ ಕೆರೆಮೂಲೆ ನಾರಾಯಣ ಕೆರೆಮನೆ, ಸೆಲ್ಕೋ ಸಂಸ್ಥೆಯ ಏರಿಯ ಮ್ಯಾನೇಜರ್ ಪ್ರಸಾದ್, ಸುಳ್ಯ ಶಾಖೆಯ ಮ್ಯಾನೇಜರ್ ಆಶಿಕ್ ಹಾಗೂ ಉದ್ಯೋಗಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
- Sunday
- November 24th, 2024