ಸುಳ್ಯ ನ.ಪಂ. ವ್ಯಾಪ್ತಿಯಲ್ಲಿ ೩ ಕೋಟಿ ರೂಗಳ ವಿವಿಧ ರಸ್ತೆಗಳ ಕಾಮಗಾರಿಗಳ ಗುದ್ದಲಿಪೂಜೆಯನ್ನು ಸಚಿವ ಅಂಗಾರ ನೆರವೇರಿಸಿದರು. ಕೇರ್ಪಳ- ಬೂಡು ರಸ್ತೆಯ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ರಸ್ತೆ ನಿರ್ಮಾಣಕ್ಕೆ ಬೇಕಾದ ಅನುದಾನ ತರಲು ನಾವು ಬದ್ಧರಾಗಿದ್ದೇವೆ. ಆದರೆ ಕೆಲವು ಕಡೆ ಜನರು ಭೂ ಒತ್ತುವರಿ ಮಾಡಿಕೊಂಡು ಅಥವಾ ಸ್ಥಳ ಬಿಟ್ಟುಕೊಡದೇ ರಸ್ತೆ ನಿರ್ಮಾಣಕ್ಕೆ ತೊಡಕಾಗಿ ಪರಿಣಮಿಸಬಾರದು ಎಂದು ಮನವಿ ಮಾಡಿದರು. ನ.ಪಂ. ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಮಾತನಾಡಿ ಜನರು ರಸ್ತೆ ಅಭಿವೃದ್ಧಿಯಾಗಲು ಜಾಗ ಅವಶ್ಯಕವಿದ್ದಲ್ಲಿ ಬಿಟ್ಟುಕೊಟ್ಟು ಸಹಕರಿಸಿ ಎಂದರು.
ಜಟ್ಟಿಪಳ್ಳ ವಸಂತ ಕಟ್ಟೆ ಬಳಿಯ ಕಾನತ್ತಿಲ- ಜಟ್ಟಿಪಳ್ಳ ೨ನೇ ವಾರ್ಡ್ ಸಂಪರ್ಕಿಸುವ ೨ ಮುಖ್ಯ ರಸ್ತೆ, ಚರಂಡಿ, ಮೋರಿ ನಿರ್ಮಾಣಕ್ಕೆ ಚಾಲನೆ ನೀಡಿದ ಬಳಿಕ ಶಾಂತಿನಗರದ ಕುಕ್ಕಾಜೆಕಾನ ಮತ್ತು ಮೂಡೆಕಲ್ಲು ರಸ್ತೆಯ ಗುದ್ದಲಿ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭ ನ.ಪಂ. ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ನ.ಪಂ. ಸದಸ್ಯರು ಹಾಗೂ ಸ್ಥಳಿಯ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.
- Friday
- November 1st, 2024