ಸರಕಾರಿ ಬಸ್ ನೌಕರರ ಮುಷ್ಕರ 2 ನೇ ದಿನಕ್ಕೆ ಕಾಲಿರಿಸಿದ್ದು ಸರಕಾರಿ ಬಸ್ ಸೇವೆ ಇಂದು ಕೂಡ ಇಲ್ಲದಾಗಿದೆ. ಸರಕಾರದ ಯಾವುದೇ ಸೂಚನೆ ಲೆಕ್ಕಿಸದೇ ತಮ್ಮ ಬೇಡಿಕೆ ಇಡೇರಿಸುವಂತೆ ನೌಕರರ ಸಂಘ ಒತ್ತಾಯಿಸಿದೆ. ಸುಳ್ಯದಲ್ಲಿ ಬಸ್ ಇಲ್ಲದಿದ್ದರೂ ಖಾಸಗಿ ವಾಹನಗಳು ತಮ್ಮ ಸೇವೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಹೆಚ್ಚೆನೂ ಸಮಸ್ಯೆ ಉದ್ಭವಿಸಿರುವುದು ಕಂಡುಬಂದಿಲ್ಲ. ಸುಳ್ಯ ಬಸ್ ನಿಲ್ದಾಣದಲ್ಲಿ ಟೂರಿಸ್ಟ್ ವಾಹನಗಳು ಪ್ರಯಾಣಿಕರಿಗೆ ಸೇವೆ ನೀಡಲು ಸಜ್ಜಾಗಿ ನಿಂತಿದೆ.
ಸುಳ್ಯದಿಂದ ಪುತ್ತೂರಿಗೆ ತೆರಳಲು 4 ಖಾಸಗಿ ಬಸ್ ಹಾಗೂ 4 ಟೆಂಪೋ ಈಗಾಗಲೇ ವ್ಯವಸ್ಥೆ ಮಾಡಲಾಗಿದೆ. ಸುಳ್ಯದಿಂದ ಮಡಿಕೇರಿಗೆ ತೆರಳುವವರಿಗೆ ಟೂರಿಸ್ಟ್ ಕಾರು ಮತ್ತು ಟಿಟಿ ವಾಹನಗಳು ಬಂದು ನಿಂತಿವೆ. ಪುತ್ತೂರಿಗೆ 40 ಹಾಗೂ ಮಡಿಕೇರಿಗೆ 200 ದರ ನಿಗದಿಪಡಿಸಲಾಗಿದೆ ಎಂದು ಚಾಲಕರೊಬ್ಬರು ತಿಳಿಸಿದ್ದಾರೆ.