ಹರಿಹರ ಪಲ್ಲತ್ತಡ್ಕ ಮತ್ತು ಕೊಲ್ಲಮೊಗ್ರು ಗ್ರಾಮಪಂಚಾಯತ್ ಕ್ಷೇತ್ರದಲ್ಲಿ ಯಾವುದೇ ಮದ್ಯದಂಗಡಿ ಮತ್ತು ಬಾರ್ & ರೆಸ್ಟೋರೆಂಟ್ ಗಳನ್ನು ಹೊಸತಾಗಿ ತೆರೆಯದಂತೆಯೂ ಮತ್ತು ಬೇರೆ ಕಡೆಯಿಂದ ಸ್ಥಳಾಂತರಗೊಳ್ಳದಂತೆ ಹರಿಹರ ಪಲ್ಲತ್ತಡ್ಕ ಗ್ರಾಮದ ಮದ್ಯಮುಕ್ತ ಗ್ರಾಮ ಹೋರಾಟ ಸಮಿತಿ ಹರಿಹರ ಪಲ್ಲತ್ತಡ್ಕ ಇದರ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಅಬಕಾರಿ ಜಿಲ್ಲಾಧಿಕಾರಿಗಳಿಗೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮಾ.22ರಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಚಂದ್ರಹಾಸ ಶಿವಾಲ, ಸತೀಶ್.ಟಿ.ಎನ್, ವಿಜಯ ಅಂಙಣ, ಹಿಮ್ಮತ್.ಕೆ.ಸಿ, ದುರ್ಗದಾಸ್ ಮಲ್ಲಾರ, ಪ್ರದೀಪ್.ಕೆ.ಎಲ್, ಜಯರಾಮ ಕರಂಗಲ್ಲು, ಬಾಲಸುಬ್ರಮಣ್ಯ ಉಪಸ್ಥಿತರಿದ್ದರು.
ವರದಿ:-ಉಲ್ಲಾಸ್ ಕಜ್ಜೋಡಿ